
ಅ 14 ಕಳಿಯ: ಗ್ರಾಮ ಪಂಚಾಯತ್ ನ ಸಾಮಾಜಿಕ ನ್ಯಾಯ ಸಮಿತಿಗೆ ಬಂದ ನ್ಯಾಯತರ್ಪು ಗ್ರಾಮದ ಕರತ್ತೂರು ಎಂಬಲ್ಲಿ ಕೃಷಿಕರೋರ್ವರ ತೋಟದಲ್ಲಿ ಹೊಸದಾಗಿ ಮಾಡಿದ ಚರಂಡಿ ಮೂಲಕ ಇನ್ನೋರ್ವ ಕೃಷಿಕರ ಗದ್ದೆಗೆ ನೀರು ಹೋಗಿ ತೊಂದರೆ ಆಗುತ್ತಿದೆ ಎಂಬ ಬಗ್ಗೆ ದೂರು ನೀಡಿದ್ದು, ಇದನ್ನು ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಿದಂತೆ ಈ ದಿನ ಪಂಚಾಯತ್ ನ್ಯಾಯ ಸಮಿತಿಯ ಸದಸ್ಯರು, ಅಧಿಕಾರಿ ವರ್ಗ ಹಾಗೂ ಇತ್ತಂಡಗಳನ್ನು ಸ್ಥಳಕ್ಕೆ ಕರೆಯಿಸಿ ಪರಿಶೀಲನೆ ನಡೆಸಿ ಸೌಹಾರ್ಧಯುತವಾಗಿ ಇತ್ಯರ್ಥ ಪಡಿಸಲಾಯಿತು.
ನ್ಯಾಯ ಸಮಿತಿಯ ಅಧ್ಯಕ್ಷೆ ಪುಷ್ಪಾ, ಅಭಿವೃದ್ದಿ ಅಧಿಕಾರಿ ಸಂತೋಷ್ ಪಾಟೀಲ್ ಸದಸ್ಯರಾದ ಸುಧಾಕರ ಮಜಲು, ಅಬ್ದುಲ್ ಕರೀಮ್, ಮೋಹಿನಿ, ವಿಜಯ ಗೌಡ ಲತೀಫ್ ಪರಿಮ, ಮರೀಟಾ ಪಿಂಟೋ, ಕಾರ್ಯದರ್ಶಿ ಕುಂಙ ಕೆ., ಸಿಬ್ಬಂದಿ ರವಿ ಎಚ್. ಹಾಗೂ ಸ್ಥಳೀಯರು ಹಾಜರಿದ್ದರು.