
ಉಜಿರೆ: ಉಜಿರೆ: ಮಿತ್ರ ಮಹಿಳಾ ಮಂಡಳಿ ಅರಳಿ ಮತ್ತು ಮಿತ್ರ ಯುವಕ ಮಂಡಳಿ (ರಿ) ಅರಳಿ ಅರಳಿ ಇವರ ಜಂಟಿ ಆಶ್ರಯದಲ್ಲಿ ಆ.10ರಂದು ಆಟಿದ ಅಟಿಲ್ ಕಾರ್ಯಕ್ರಮವು ಉಜಿರೆ ಗ್ರಾ.ಪಂ. ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ ಇವರ ಉದ್ಘಾಟನೆಯೊಂದಿಗೆ ನೆರವೇರಿತು. ಈ ವೇಳೆ ಪಂಚಾಯತ್ ಸದಸ್ಯ ಜಗನ್ನಾಥ್ ರೈ, ಉದ್ಯಮಿ ದೇವಪ್ಪ ಗೌಡ ಸಾಯಿಕೃಪಾ ಉಪಸ್ಥಿತರಿದ್ದರು.

ಅದೇ ರೀತಿ ಆಗಸ್ಟ್ 3ರಂದು ಮಿತ್ರ ಮಹಿಳಾ ಮತ್ತು ಯುವಕ ಮಂಡಲ ಅರಳಿ ಇದರ ಜಂಟಿ ಆಶ್ರಯದಲ್ಲಿ ಸುಂದರ ಬಂಗೇರ ಅರಳಿ ಅಲ್ಯೊಟ್ಟು ಅವರ ಗದ್ದೆಯಲ್ಲಿ 3ನೇ ವರ್ಷದ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮ ಹರೀಶ್ ಶೆಟ್ಟಿ ಕಾಶಿಬೆಟ್ಟು ಅವರ ಉದ್ಘಾಟನೆಯಂದಿಗೆ ಅದ್ದೂರಿಯಾಗಿ ಜರುಗಿತು. ವೇದಿಕೆಯಲ್ಲಿ ಅರಳಿ ಮಿತ್ರ ಯುವಕ ಮಂಡಲ ಅಧ್ಯಕ್ಷ ಅಶೋಕ್ ಕುಕ್ಕೆಶ್ರೀ ಹಾಗೂ ಮಿತ್ರ ಮಹಿಳಾ ಮಂಡಳಿ ಅಧ್ಯಕ್ಷೆ ಸವಿತ ಅರಳಿ ಅವರು ಉಪಸ್ಥಿತರಿದ್ದರು. ಕೆಸರ್ಡ್ ಒಂಜಿ ದಿನ ಕಾರ್ಯಕ್ರಮದಲ್ಲಿ ನಾನಾ ಸ್ಪರ್ಧೆಗಳನ್ನು ಏರ್ಪಡಿಲಾಗಿತ್ತು.