
ಬೆಳ್ತಂಗಡಿ: ಲಾಯಿಲ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 21ನೇ ವರ್ಷದ ಮೊಸರು ಕುಡಿಕೆ ಉತ್ಸವ ಆ.17ರಂದು ವಿಶ್ವೇಶ್ವರ ಕಲಾ ಮಂದಿರ ಲಾಯಿಲದಲ್ಲಿ ನಡೆಯಲಿದೆ. ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್ ಜನಾರ್ದನ ಉದ್ಘಾಟನೆ ಮಾಡಲಿದ್ದಾರೆ. – ಮುಖ್ಯ ಅತಿಥಿಗಳಾಗಿ ಉಜಿರೆ ಗ್ರಾಮ ನ ಪಂಚಾಯತ್ ಅಧ್ಯಕ್ಷೆ ಉಷಾ ಕಾರಂತ್, ಕೊಯ್ಯರು ಸಿ..ಎ ಬ್ಯಾಂಕಿನ ಅಧ್ಯಕ್ಷ “‘ ರವೀಂದ್ರನಾಥ್ ಗೌಡ ಪೆರ್ಮುದೆ, ಸುದ್ದಿ ಉದಯ ವಾರಪತ್ರಿಕೆಯ ವ್ಯವಸ್ಥಾಪಕ ಈ ನಿರ್ದೇಶಕ ತುಕರಾಮ ಬಿ, ಬೆಳ್ತಂಗಡಿ ಜೆ.ಸಿಐ ಅಧ್ಯಕ್ಷೆ ಆಶಾಲತ ಪ್ರಶಾಂತ್, ನಿವೃತ್ತ ಸೈನಿಕ ಶಿವಕುಮಾರ್, ಲಾಯಿಲ ” ಸಾರ್ವಜನಿಕ ಗಣೇಶೋತ್ಸವ ಅಧ್ಯಕ್ಷ ಅಶೋಕ್ ಶೆಟ್ಟಿ, ಲಾಯಿಲ ಗ್ರಾ.ಪಂ ಕಾರ್ಯದರ್ಶಿ ತಾರನಾಥ ನಾಯ್ಕ ಕೆ, ಬೆಳ್ತಂಗಡಿ ಯುವ ಮೋರ್ಚಾ ಕಾರ್ಯದರ್ಶಿ ಸುಧೀರ್ ಚಾರ್ಮಾಡಿ ಉಪಸ್ಥಿತರಿರಲಿದ್ದಾರೆ.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಲಾಯಿಲ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿಯ ಅಧ್ಯಕ್ಷ ಭೋಜರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ಎಕ್ಸೆಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ನಂದನ್ ಮಲ್ಯ, ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ, ಉದ್ಯಮಿ ಸುಕುಮಾರ್ ಶೆಟ್ಟಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರಾದ ಬಕ್ಕಪ್ಪ, ವಾಣಿ ಸೌಹರ್ದ ಕೋ-ಆಪರೇಟಿವ್ ಸೊಸೈಟಿಯ ನಿರ್ದೇಶಕ ಶ್ರೀನಾಥ ಗೌಡ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ಉಪಸ್ಥಿತಿ ಇರಲಿದ್ದಾರೆ.
ಕಾರ್ಯಕ್ರಮ ವಿವರ: ಸಾರ್ವಜನಕರಿಗೆ, ಮಹಿಳೆಯರಿಗೆ ಹಾಗೂ ಶಾಲಾ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆ ನಡೆಯಲಿದೆ.ಮಕ್ಕಳಿಗೆ ಮುದ್ದು ಕೃಷ್ಣ ಹಾಗೂ ಬಾಲ ಕೃಷ್ಣ ಸ್ಪರ್ಧೆ ನಡೆಯಲಿದೆ ಎಂದು ಲಾಯಿಲ ಶ್ರೀ ಕೃಷ್ಣಷ್ಟಮಿ ಸಮಿತಿಯ ಅಧ್ಯಕ್ಷ ಭೋಜರಾಜ್ ತಿಳಿಸಿದ್ದಾರೆ.