“ಆಧುನಿಕ ಉದ್ಯೋಗ ಮಾರುಕಟ್ಟೆಯಲ್ಲಿ ಉದ್ಯೋಗಾರ್ಹತಾ ಕೌಶಲ್ಯ ಮತ್ತು ಅವಕಾಶಗಳ ವಾಸ್ತವತೆ” ಈ ವಿಚಾರದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ

0

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಮಹಾವಿದ್ಯಾಲಯದ ಉಜಿರೆಯ ವಾಣಿಜ್ಯ ಶಾಸ್ತ್ರ ವಿಭಾಗ ಮತ್ತು SDM-ರೋಟರಿ ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ (HRD) ಕೇಂದ್ರ ಜಂಟಿಯಾಗಿ“ಆಧುನಿಕ ಉದ್ಯೋಗ ಮಾರುಕಟ್ಟೆಯಲ್ಲಿ ಉದ್ಯೋಗಾರ್ಹತಾ ಕೌಶಲ್ಯ ಮತ್ತು ಅವಕಾಶಗಳ ವಾಸ್ತವತೆ” ಈ ವಿಚಾರದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಿತು.

ಈ ಕಾರ್ಯಕ್ರಮ ಆ.8ರಂದು ಎಸ್.ಡಿ.ಎಂ ಕಾಲೇಜಿನ ಆಡಿಟೋರಿಯಂ ಸಂಪನ್ನಗೊಂಡಿತು. ತೃತೀಯ ಬಿಕಾಂ ವಿದ್ಯಾರ್ಥಿಗಳಿಗಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ 275 ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡರು. ಬೆಂಗಳೂರಿನ Reliance Skilling Academy ಸಂಸ್ಥೆಯ ವೃತ್ತಿ ಮಾರ್ಗದರ್ಶನ ಮತ್ತು ತರಬೇತಿ ವಿಭಾಗದ ಮುಖ್ಯಸ್ಥ ಪ್ರೀತಂ ಪ್ರಸಾದ್ ಎಸ್. ಅವರು ಸಂಪನ್ಯೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಮತ್ತು ಅವರು ಇಂದಿನ ವೇಗವಾಗಿ ಬದಲಾಗುತ್ತಿರುವ ಉದ್ಯೋಗ ಕ್ಷೇತ್ರದಲ್ಲಿ ಕೇವಲ ಶೈಕ್ಷಣಿಕ ಅರ್ಹತೆಗಳು ಸಾಕಾಗುವುದಿಲ್ಲ. ಉದ್ಯೋಗದಾತರು ಶ್ರೇಷ್ಠವಾದ ಉದ್ಯೋಗಾರ್ಹತೆ ಕೌಶಲ್ಯಗಳನ್ನು ಹೊಂದಿರುವ ಅಭ್ಯರ್ಥಿಗಳನ್ನು ಸೂಕ್ತ ತಂತ್ರಜ್ಞಾನ ಬಳಸಿ ಪರೀಕ್ಷಿಸಿ ಆಯ್ಕೆ ಮಾಡಲಾಗುತ್ತದೆ. ಸಂವಹನ ಕೌಶಲ್ಯ, ಗುಣಾತ್ಮಕ ಯೋಗ್ಯತಾ ಕೌಶಲ್ಯಗಳು, ಹಾಗೂ ಡಿಜಿಟಲ್ ಸಾಕ್ಷರತೆ ಗಳಿಗೆ ಸಂಬಂದಿಸಿದ ಆಯ್ಕೆಯ ಪ್ರಕ್ರಿಯೆಯ ಮೂಲಕ ಅಭ್ಯರ್ಥಿಗಳನ್ನು ಕೆಲಸದ ಸ್ಥಳಗಳಲ್ಲಿ ಯಶಸ್ವಿಯಾಗಲು ಪರೀಕ್ಷಿಸಿ ಆಯ್ಕೆ ಮಾಡಲಾಗುತ್ತದೆ. ಆಧುನಿಕ ಉದ್ಯೋಗ ಮಾರುಕಟ್ಟೆಯು ವಾಸ್ತವಾಗಿ ಸ್ವಯಂಚಾಲಿತ ಜಾಗತೀಕರಣ ಹಾಗೂ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನಗಳು ರೂಪಿಸುತ್ತಿದ್ದು, ಇದು ಹೊಸ ಅವಕಾಶಗಳೊಂದಿಗೆ ತೀವ್ರ ಸ್ಪರ್ಧೆಯನ್ನೂ ತಂದಿದೆ. ಪದವೀಧರರು ತಮ್ಮ ಕೌಶಲ್ಯಗಳನ್ನು ಕೈಗಾರಿಕಾ ಅಗತ್ಯಗಳಿಗೆ ಹೊಂದಿಸಿಕೊಳ್ಳಬೇಕು, ನಿರಂತರ ಕಲಿಕೆಯಯಿಂದ ಇದು ಸಾಧ್ಯ ಮತ್ತು ಬದಲಾಗುತ್ತಿರುವ ಕೆಲಸದ ಪರಿಸರಗಳಿಗೆ ಹೊಂದಿಕೊಳ್ಳಬೇಕು, ಆಗ ಮಾತ್ರ ಅವರು ಪ್ರಸ್ತುತ ಮತ್ತು ಸ್ಪರ್ಧಾತ್ಮಕವಾಗಿರಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.

ಈ ಕಾರ್ಯಕ್ರಮ ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ. ಅವರ ಮಾರ್ಗದರ್ಶನದಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ರತ್ನವತಿ ಕೆ. ಅವರ ಉಪಸ್ಥಿತಿಯಲ್ಲಿ, ಎಸ್.ಡಿ.ಎಂ-ರೋಟರಿ ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ (HRD) ಕೇಂದ್ರವು ನಿರ್ದೇಶಕ ಡಾ. ನಾಗರಾಜ ಪೂಜಾರಿ ಕಾರ್ಯಕ್ರಮವನ್ನು ಸಂಘಟಿಸಿದ್ದರು. ಮತ್ತು ವೃತ್ತಿ ಮಾರ್ಗದರ್ಶನ ಕೇಂದ್ರದ ಸದಸ್ಯರು ಮತ್ತು ವಿದ್ಯಾರ್ಥಿ ಪ್ರತಿನಿಧಿಗಳು ಸಹಕಾರ ನೀಡಿದರು.

LEAVE A REPLY

Please enter your comment!
Please enter your name here