
ಕಳಿಯ ಗ್ರಾಮ ಪಂಚಾಯತ್ ನ ಸಾಮಾನ್ಯ ಸಭೆ ಆ. 11ರಂದು ನಡೆಯಿತು.
ಪಂಚಾಯತ್ ಅಧ್ಯಕ್ಷ ದಿವಾಕರ ಎಂ. ಅಧ್ಯಕ್ಷತೆ ವಹಿಸಿದ್ದರು. ಪಿಡಿಓ ಸಂತೋಷ್ ಪಾಟೀಲ್ ಸ್ವಾಗತಿಸಿ, ಸರಕಾರದ ಸುತ್ತೋಲೆಗಳನ್ನು ಸಭೆಗೆ ಓದಿ ಹೇಳಿದರು. ಗ್ರಾಮಸ್ಥರ ವಿವಿದ ಅರ್ಜಿಗಳನ್ನು ಕಾರ್ಯದರ್ಶಿ ಓದಿ ಹೇಳಿದರು.
ಗ್ರಾಮದ ಅಭಿವೃದ್ಧಿ ಬಗ್ಗೆ ಗಂಭೀರ ಚರ್ಚೆ ನಡೆಸಿದರು.15 ನೇ ಹಣಕಾಸಿನ ಅನುದಾನವನ್ನು ವಾರ್ಡ್ ಗಳಿಗೆ ವಿಂಗಡಿಸಲಾಯಿತು. ಅಧ್ಯಕ್ಷರ ಅನುಮತಿ ಮೇರೆಗೆ ಇತರ ವಿಷಯಗಳ ಚರ್ಚೆ ನಡೆಯಿತು.
ಗ್ರಾಮ ಪಂಚಾಯತ್ ನಲ್ಲಿ ಹಲವಾರು ವರ್ಷಗಳಿಂದ ಪಂಪ್ ಚಾಲಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಕೊರಗಪ್ಪರವರನ್ನು ಬೀಳ್ಕೊಡಲಾಯಿತು.
ಸಭೆಯಲ್ಲಿ ಉಪಾದ್ಯಕ್ಷೆ ಇಂದಿರಾ ಬಿ., ಸುಧಾಕರ ಮಜಲು, ಅಬ್ದುಲ್ ಕರೀಮ್, ಮೋಹಿನಿ, ಸುಭಾಷಿಣಿ ಕೆ., ಹರೀಶ್ ಕುಮಾರ್, ವಿಜಯ ಗೌಡ, ಲತೀಫ್ ಪರಿಮ, ಮರೀಟಾ ಪಿಂಟೋ, ಕುಸುಮಾ ಎನ್. ಬಂಗೇರ, ಯಶೋದರ ಶೆಟ್ಟಿ, ಪುಷ್ಪಾ, ಶ್ವೇತಾ, ಶಕುಂತಲ ಸಿಬ್ಬಂದಿಗಳಾದ ಸುಚಿತ್ರಾ, ಶಶಿಕಲಾ, ರವಿ ಎಚ್., ನಂದಿನಿ, ಸುರೇಶ್ ಗೌಡ, ಮಾನಸ ಹಾಜರಿದ್ದರು. ಕೊನೆಯಲ್ಲಿ ಕಾರ್ಯದರ್ಶಿ ಕುಂಙ ಕೆ. ದನ್ಯವಾದವಿತ್ತರು.ರಾಷ್ಟ್ರ ಗೀತೆಯೊಂದಿಗೆ ಸಭೆ ಕೊನೆಗೊಂಡಿತು.