ಆ.17ಕ್ಕೆ ಉಜಿರೆಯಲ್ಲಿ ಅಗ್ರಿಲೀಫ್ ಉದ್ಯೋಗ ಮೇಳ ಪರಿಣತ ಉದ್ಯೋಗಾಕಾಂಕ್ಷಿಗಳಿಗೆ ಸಂಸ್ಥೆಯಿಂದ ಅವಕಾಶ

0

ಬೆಳ್ತಂಗಡಿ: ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಪ್ರಕೃತಿಯಿಂದ ಸಹಜವಾಗಿ ದೊರಕುವ ಅಡಿಕೆ ಹಾಳೆಗಳನ್ನು ಉಪಯೋಗಿಸಿ ತಟ್ಟೆ, ಬೌಲ್, ಟ್ರೇ, ಚಮಚ ಇತ್ಯಾದಿಗಳನ್ನು ತಯಾರಿಸುತ್ತಿರುವ, ಅಂತರ್ ರಾಷ್ಟ್ರೀಯ ಮಟ್ಟದ ಗುಣಮಟ್ಟ ಹೊಂದಿರುವ ಮತ್ತು ರಫ್ತು ಚಟುವಟಿಕೆಯಲ್ಲಿ ದೇಶದ ನಂ.1 ಸಂಸ್ಥೆಯಾಗಿರುವ ಬೆಳ್ತಂಗಡಿ ತಾಲೂಕಿನ ನಿಡ್ಲೆಯ “ಅಗ್ರಿಲೀಫ್ ಎಕ್ಸ್‌ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್”, ಇದೀಗ ಉದ್ಯೋಗಾಕಾಂಕ್ಷಿಗಳಿಗೆ ತನ್ನ ಬಾಗಿಲು ತೆರೆದು ಸ್ವಾಗತಿಸಲು ಸಜ್ಜಾಗಿದೆ.

ಇದೇ ಆಗಸ್ಟ್ 17ರ ಭಾನುವಾರದಂದು ಬೆಳ್ತಂಗಡಿ ತಾಲೂಕಿನ ಉಜಿರೆಯ “ದಿ ಓಷನ್ ಪರ್ಲ್” ಹೊಟೇಲ್‌ನಲ್ಲಿ ಬೆಳಗ್ಗೆ 9 ಗಂಟೆಯಿಂದ ಅಗ್ರಿಲೀಫ್ ಸಂಸ್ಥೆಯ “ವಾಕ್ ಇನ್ ಡೈವ್ ಉದ್ಯೋಗ ಮೇಳ” ನಡೆಯಲಿದೆ. ಪರಿಣತಿ ಹೊಂದಿದ ಅರ್ಹ ಅಭ್ಯರ್ಥಿಗಳಿಗೆ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ ನಡೆಯಲಿದೆ. ದೇಶ ವಿದೇಶಗಳಲ್ಲಿ ನೆಲೆಸಿರುವ ಮತ್ತು ತಮ್ಮ ತಾಯ್ಯಾಡಿಗೆ ಮರಳಲು ಇಚ್ಛಿಸುವ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಉದ್ಯೋಗ ಮೇಳದಲ್ಲಿ ಪಾಲ್ಗೊಂಡು, ಈ ಸದಾವಕಾಶದ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ ನಡೆದ ಉದ್ಯೋಗ ಮೇಳದಲ್ಲಿ 600ಕ್ಕೂ ಮಿಕ್ಕಿ ಅಭ್ಯರ್ಥಿಗಳು ಪಾಲ್ಗೊಂಡು, ಅಗ್ರಿಲೀಫ್ ಸಂಸ್ಥೆ ಯಶಸ್ವೀ ಉದ್ಯೋಗ ಮೇಳ ನಡೆಸಿದ ಕೀರ್ತಿಗೆ ಪಾತ್ರವಾಗಿತ್ತು. ಕಳೆದ ವರ್ಷಕ್ಕಿಂತ ಹೆಚ್ಚಿನ ಸ್ಪಂದನೆಯನ್ನು ಉದ್ಯೋಗಾಕಾಂಕ್ಷಿಗಳಿಂದ ಈ ವರ್ಷ ಸಂಸ್ಥೆ ನಿರೀಕ್ಷಿಸಿದೆ.

LEAVE A REPLY

Please enter your comment!
Please enter your name here