
ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಮೃತದೇಹಗಳನ್ನು ಹೂತಿಟ್ಟಿದ್ದೇನೆಂದಿರುವ ವ್ಯಕ್ತಿಯ ಪ್ರಕರಣದ ತನಿಖೆಯನ್ನು ಎಸ್.ಐ.ಟಿ ತ್ವರಿತವಾಗಿ ನಡೆಸುತ್ತಿದೆ. ಈಗಾಗಲೇ ಸಾಕ್ಷಿ ದೂರುದಾರ ತೋರಿಸಿರುವ ಗುರುತುಗಳಲ್ಲಿ ಈಗಾಗಲೇ 12ಗುರುತುಗಳ ಉತ್ಖನನ ಕಾರ್ಯವಾಗಿದೆ.
ಇನ್ನೂ 13 ನೇಉತ್ಖನನ ಕಾರ್ಯ ನಡೆಯುವ ಮುನ್ನ ಎಸ್. ಐ. ಟಿ. ಮುಖ್ಯಸ್ಥ ಪ್ರಣವ್ ಮೊಹಾಂತಿ ಅವರು ಈಗಾಗಲೇ ಬೆಳ್ತಂಗಡಿಗೆ ಆಗಮಿಸಿದ್ದು, ಬೆಳ್ತಂಗಡಿಯ ಎಸ್ಐಟಿ ಕಚೇರಿಯಲ್ಲಿ ಡಿಐಜಿ ಅನುಚೇತ್, ತನಿಖಾಧಿಕಾರಿ ಜಿತೇಂದ್ರ ದಯಾಮ, ಎಸಿ ಸ್ಟೆಲ್ಲಾ ವರ್ಗೀಸ್ ಹತ್ತು ದಿನದ ಕಾರ್ಯಾಚರಣೆಯ ಬಗ್ಗೆ ರಿಪೋರ್ಟ್ ಅಧಿಕಾರಿಗಳಿಂದ ತನಿಖಾ ಪ್ರಗತಿಯ ಮಾಹಿತಿ ಪಡೆಯುತ್ತಿರುವ ಪ್ರಣಬ್ ಮೊಹಂತಿ.