ಮುಂಡಾಜೆಯಲ್ಲಿ ಕೀರ್ತನಾ ಕಲಾ ತಂಡದಿಂದ ಆಟಿಡೊಂಜಿ ಐತಾರ ಕಾರ್ಯಕ್ರಮ

0

ಬೆಳ್ತಂಗಡಿ: ತುಳುನಾಡಿನ ಮರೆತು ಹೋದ ಆಚರಣೆಗಳು ಮತ್ತು ಆಹಾರಗಳನ್ನು ಪರಿಚಯ ಮಾಡಿ ಸ್ವತಃ ಉಣಬಡಿಸಿ ತುಳುನಾಡಿನ ವೈವಿಧ್ಯತೆಯನ್ನು ನೆನಪಿಸುವ- ಮುಂದಿನ ಪೀಳಿಗೆಗೆ ಅರಿವು ಮೂಡಿಸುವ ಆಟಿಡೊಂಜಿ ಐತಾರ ಕಾರ್ಯಕ್ರಮವು ಸದಾನಂದ ಬಿ. ಮುಂಡಾಜೆ ಅವರ ಕೀರ್ತನಾ ಕಲಾ ತಂಡದ ನೇತೃತ್ವದಲ್ಲಿ ಸಂಘಟಿಸಲಾಯಿತು.

ನಿಜವಾಗಿಯೂ ತುಳುನಾಡು ಎನ್ನುವುದು‌ ಒಂದು‌ ವೈವಿಧ್ಯಮಯ ಅಚರಣೆ ಇರುವ ಪ್ರದೇಶ. ತುಳುನಾಡಿನ ಮೂಲ ಸತ್ವದ ಆಚರಣೆಗಳು ಆಹಾರಗಳನ್ನು ಬಿಟ್ಟು ಹೊರ ಭಾಗಗಳಿಂದ ಬಂದಿರುವಂತಹ ಆಚಾರ, ವಿಚಾರ, ಆಹಾರವನ್ನು ಹೆಚ್ಚು ನಾವು ಅವಲಂಬಿಸಿರುವುದರಿಂದ ನಮ್ಮ ಜೀವನ ಶೈಲಿ ಬದಲಾದದ್ದು ಅಂತೂ ಸತ್ಯ, ಇಂದು ಈ ಕಾರ್ಯಕ್ರಮದಲ್ಲಿ ಅತ್ಯಂತ ಸರಳವಾಗಿ ತುಳುನಾಡಿನ ಅದ್ಭುತಗಳನ್ನು ರೂಪಕಗಳ ಮುಖಾಂತರ ನೈಜತೆಯನ್ನು ಬಿಂಬಿಸುವ ಪ್ರಯತ್ನ ವನ್ನು ಕೀರ್ತನಾ ಕಲಾತಂಡ ಮಾಡಿದೆ. ನಿಜವಾಗಿಯೂ ಇಂಥ ಪ್ರಯತ್ನಗಳು ತುಳುನಾಡಿನ ಎಲ್ಲ ಕಡೆ ಆಗಬೇಕು ಮತ್ತು ಅಚರಣೆಗಳು ಉಳಿಯಬೇಕು ಎನ್ನುವ ನಿಟ್ಟಿನಲ್ಲಿ‌ ಮಾಡುತ್ತಿರುವ ಈ ಪ್ರಯತ್ನ ಶ್ಲಾಘನೀಯ.

ಈ ಕಾರ್ಯಕ್ರಮದಲ್ಲಿ ಆಟಿ ಕಳೆಂಜ ಊರಿನ ಮಾರಿ ರೋಗಗಳನ್ನು ಓಡಿಸುವ ತನಕ ಮತ್ತು ನಮ್ಮ ತುಳುನಾಡಿನಲ್ಲಿ ಹಿರಿಯರು ಬಳಸುತ್ತಿದ್ದ ನೇಗಿಲು, ಒನಕೆ, ಕಳಸ, ಬಳ್ಳ, ಸೇರು ಹಾಗೂ ಕೃಷಿಕನಿಗೆ ಸಹಕಾರಿಯಾಗುವಂತ ಅನೇಕ ಪರಿಕರಗಳನ್ನು ಪ್ರದರ್ಶನ ಮಾಡಿರುವುದಂತೂ ಈ ಜನಪದೀಯ ಕಾರ್ಯಕ್ರಮಕ್ಕೆ ಮೆರುಗು ನೀಡಿದೆ ಭಾಗವಹಿಸಿದವರೆಲ್ಲೊಂದು ಸಂಘ ಶಕ್ತಿಯು ಎದ್ದು ಕಾಣುತ್ತಿತ್ತು. ಇದೀಗ ಕಾರ್ಯಕ್ರಮಗಳಲ್ಲಿ ಸಾಮಾನ್ಯವಾಗಿ ಭೋಜನವನ್ನು ಕ್ಯಾಟರಿಂಗ್ ಗಳಿಂದ ತರಿಸಿ ನಿಶ್ಚಿಂತೆಯಲ್ಲಿ ಕಾರ್ಯಕ್ರಮ ನಡೆಸುತ್ತಾರೆ. ಆದರೆ ಕೀರ್ತನ ಕಲಾತಂಡದವರು ಪ್ರತಿಮನೆಯಿಂದ ತುಳುನಾಡಿನ ಪರಂಪರೆಯ ಆಹಾರಗಳನ್ನು ತಯಾರಿ ಮಾಡಿ ಆಟಿದ ಐತಾರೊ ದಿನ ವನ್ನು ವಿಶಿಷ್ಟವಾಗಿ ಆಚರಿಸಿದ್ದಂತೂ ಸುಳ್ಳಲ್ಲ ತಮ್ಮ ಹಿರಿಯರು ಮಾಡುತ್ತಿದ್ದ ಕೆಲಸಕ್ಕಾಗಿ ಬಳಸುತ್ತಿದ್ದ ಸಾಧನಗಳನ್ನು ಪ್ರದರ್ಶನ ಮಾಡಿ ಇಂದಿನ ವೇಗದ ಜಗತ್ತಿನಲ್ಲಿ ಮರೆತುಹೋದ ನಮ್ಮ‌ ಹಳೆಯ ಹಳ್ಳಿಯ ಜೀವನದ ನೆನಪು ಮಾಡಿಸುವ ಪ್ರಯತ್ನ ಅಂತೂ ಸುಪರ್.

ಇದು ದಕ್ಷಿಣ ಕನ್ನಡ, ಉಡುಪಿ ಮತ್ತು ತುಳುನಾಡಿನ ಭಾಗಗಳಲ್ಲಿ ಎಲ್ಲಾ ಕಡೆ ಇದು ಹೆಚ್ಚಾಗಬೇಕಾಗಿದೆ. ಸದಾನಂದ ಮುಂಡಾಜೆ ಅವರ ಸಾಹಿತ್ಯ ಮತ್ತು ಪದ್ಯಗಳು ನಾರಾಯಣ ಶೆಟ್ಟಿ‌ ಅವರ ಅದ್ಭುತ ಕಂಠದ ಮೂಲಕ ನೆರದಿದ್ದವರನ್ನು ಪುನಃ ಒಮ್ಮೆ ನಮ್ಮ ಹಿರಿಯರು ಬದುಕಿದ್ದ ಕಾಲಕ್ಕೆ ಕರೆದುಕೊಂಡು ಹೋದದ್ದು ಅಂತೂ ಸುಳ್ಳಲ್ಲ. ಅದನ್ನು ಅರ್ಥಪಡಿಸಲು ಕೆಲವೊಂದು ತುಳುನಾಡಿನ ಜನಪಧೀಯ ವಿಚಾರಗಳನ್ನು ಭಾಗವಹಿಸಿದವರ ಎದುರು ಇಟ್ಟದಂತೂ ಬಹಳ ಅರ್ಥಪೂರ್ಣವಾಗಿದೆ.

ಇಂದು ಈ ರೀತಿಯ ಆಚರಣೆಗಳು ಬಹುಶ ಜಿಲ್ಲೆಯಲ್ಲಿ ನಡೆಯುತ್ತಿದೆಯೋ ಗೊತ್ತಿಲ್ಲ ಆದರೆ ನಡೆಯಬೇಕು ಎನ್ನುವುದು ಈ ಲೇಖನದ ಆಶಯ. ಇದಕ್ಕೆ ಅನೇಕ ಜನ ಈ ತುಳುನಾಡಿನ ಪರಂಪರೆಯ ಮತ್ತು ತುಳುನಾಡು ಹೋರಾಟಗಳಲ್ಲಿ ಭಾಗವಹಿಸುವುದು ನಾವು ನೋಡುತ್ತಿದ್ದೇವೆ. ಆದರೆ ಧರ್ಮದ ವಿಷಯದಲ್ಲಿ ಬಂದಾಗ ಧರ್ಮ ಆಚರಣೆ ಮಾಡಿದರೆ ಮಾತ್ರ ಉಳಿಯುವುದು ಎನ್ನುವ ಮಾತಿನಂತೆ ತುಳುನಾಡಿನ ಆಚರಣೆಗಳನ್ನು ಆಚರಿಸುವುದರ ಮೂಲಕ ತುಳುನಾಡಿನ ಶ್ರೇಷ್ಟ ಪರಂಪರೆ ಉಳಿಯುಬಹುದು. ತುಳುನಾಡಿನ ಅನೇಕ ಪದ್ಧತಿಗಳು ನಾಶವಾಗಿಯೇ ಹೋಗಿವೆ ಎನ್ನುವುದು ಕೂಡ ವಾಸ್ತವವೇ ಆಗಿದೆ. ಆಟಿಡೊಂಜಿ ಐತಾರ ಕಾರ್ಯಕ್ರಮಗಳ ಮೂಲಕ ತುಳುನಾಡಿನ ಆಚರಣೆಗಳನ್ನು ಇಂದಿನ ಪೀಳಿಗೆಗೆ ಅರಿವು ಮೂಡಿಸುವಂತಹ ಕಾರ್ಯಗಳಾಗಬೇಕು.

ಊಟವು ಫಾಸ್ಟ್ ಫುಡ್ ಲೈಫಿನಿಂದ ಹಿರಿಯರು ಮಾಡುತ್ತಿದ್ದ ಆ ಸಮೃದ್ಧ ಭೋಜನ ಅರಿವು ಮಾಡಿ ಕೊಡುವ ಈ ಪ್ರಯತ್ನ ಎಲ್ಲೆಡೆ ಆಗಬೇಕಿದೆ. ಮರೆತು ಹೋಗಿರುವಂತಹ ತಿಮರೆ ಚಟ್ನಿ, ಉಪ್ಪಡ್ ಪಚ್ಚಿರ್, ತಜಂಕ್ ಪಲ್ಯ, ಚೇವು ಗಸಿ, ಹುರುಳಿ ಚಟ್ನಿ, ನುಗ್ಗೆ ಪಲ್ಯ, ಹಲಸಿನ ಇಡ್ಲಿ, ಗಟ್ಟಿ ಬೇರೆ ಬೇರೆ ರೀತಿಯ ತುಳುನಾಡಿನ ತಿಂಡಿಗಳು ಸೇರಿದ್ದ ತುಳು ಪ್ರೇಮಿಗಳಿಗೆ ಭರ್ಜರಿ ಔತಣವನ್ನೇ ನೀಡಿತ್ತು.

ಈ ಪರಂಪರೆಯನ್ನು ತುಳುನಾಡಿನ ಪ್ರತಿ ಕುಟುಂಬಗಳು ಅಚರಿಸಿ ಉಳಿಸುವ ಅಗತ್ಯ ಇದೆ. ಇದರೊಂದಿಗೆ ಆಟಿಯಲ್ಲಿ ಒಂದು ದಿನ ನಲಿದಾಡೋಣ ಹಳೆಯ ಆಟಗಳನ್ನು ಹೊಸ ಜೀವನವನ್ನು ತುಳುನಾಡಿನ ಆಚರಣೆಗಳನ್ನು ಆಹಾರಗಳಿಗೆ ಜೀವಂತಿಕೆ ಕೊಡುವ ಕೆಲಸವನ್ನು ಮಾಡೋಣ ಎನ್ನುವ ಆಶಯ.

ಬರಹ: ಜಯರಾಜ್ ಸಾಲಿಯಾನ್ ಕಾನರ್ಪ

LEAVE A REPLY

Please enter your comment!
Please enter your name here