
ಧರ್ಮಸ್ಥಳ: ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆ.1ರಂದು 4 ನೇ ದಿನದ ಉತ್ಖನನ ಕಾರ್ಯವು 7 ಮತ್ತು8ನೇ ಗುರುತಿನಲ್ಲಿ ನಡೆಯಿತು.
ಧರ್ಮಸ್ಥಳ ಗ್ರಾಮ ಮತ್ತು ಆಸುಪಾಸಿನ ಪ್ರದೇಶದಲ್ಲಿ ಕೊಲೆಯಾದ ಮತ್ತು ಅತ್ಯಾಚಾರಕ್ಕೀಡಾಗಿ ಕೊಲೆಯಾದ ಮೃತದೇಹಗಳನ್ನು ಬೆದರಿಸಿ ಹೂತು ಹಾಕಿಸಲಾಗಿದೆ ಎಂದು ದೂರು ದಾಖಲಿಸಿರುವ ಅನಾಮಧೇಯ ವ್ಯಕ್ತಿಯೊಂದಿಗೆ ಎಸ್.ಐ.ಟಿ. ಅಧಿಕಾರಿಗಳು ಶೋಧ ಆ.1ರಂದು 7 ಮತ್ತು 8ನೇ ಗುರುತಿನಲ್ಲಿ ಕಾರ್ಯಾಚರಣೆ ನಡೆಯಿತು.
ಮಳೆಯ ಕಾರಣದಿಂದ ಗುರುತಿಸಲ್ಪಟ ಸ್ಥಳಗಳಿಗೆ ಸೀಟುಗಳನ್ನು ಅಳವಡಿಸಲಾಗಿತ್ತು. ಇಂದು ಮತ್ತೆ ಕಾರ್ಮಿಕರು ಮತ್ತು ಸಣ್ಣ ಜೆಸಿಬಿ ಯಂತ್ರದ ಮೂಲಕ ಕಾರ್ಯಚರಣೆ ನಡೆಸಿ, ಯಾವುದೆ ಕಳೇಬರ ಸಿಕ್ಕಿಲ್ಲ. ಸ್ಥಳದಲ್ಲಿ ಎರಡು ಕ್ಯಾಮೆರಾಗಳಲ್ಲಿ ಸ್ಥಳದ ಸಂಪೂರ್ಣ ಚಿತ್ರಣವನ್ನು ಅಧಿಕಾರಿಗಳು ಸೆರೆಹಿಡಿಯಲಾಗಿದೆ.
4ನೇ ದಿನದ ಉತ್ಖನನ ಕಾರ್ಯಾಚರಣೆ ಅಂತ್ಯಗೊಂಡಿತು.