
ಧರ್ಮಸ್ಥಳ: ಜೋಡುಸ್ಥಾನದ ಬಳಿ ಗಾಳಿ ಮಳೆಗೆ ಎರಡು ಮರಗಳು ಉರುಳಿದ ಪರಿಣಾಮ ಸಂಚಾರಕ್ಕೆ ತೊಂದರೆಯಾದ ಘಟನೆ ಜು.26ರಂದು ನಡೆದಿದೆ.
ಮಂಜುನಾಥ್ ಶೆಟ್ಟಿ ಅವರ ಮನೆಯ ಬಳಿ ಮತ್ತು ಮೋಹನ್ ಮಡಿವಾಳ ಅವರ ಮನೆಯ ಬಳಿ ಮರ ಬಿದ್ದಿದ್ದರಿಂದ ಸಂಚಾರಕ್ಕೆ ತೊಂದರೆಯಾಯಿತು. ಮರವನ್ನು ಸ್ಥಳೀಯರು ತೆರವು ಮಾಡಿದರೂ ವಿದ್ಯುತ್ ಕಂಬ ಮಾರ್ಗಕ್ಕೆ ಅಡ್ಡಲಾಗಿ ಉರುಳಿ ಬಿದ್ದಿರುವುದರಿಂದ ಸಂಚಾರಕ್ಕೆ ಅಡಚಣೆಯಾಗಿದೆ.
ಧರ್ಮಸ್ಥಳ ಗ್ರಾಮ ಪಂಚಾಯತ್ ಸದಸ್ಯರಾದ ಜಾಂಟಿ ಸುಧಾಕರ್, ತ್ವರಿತವಾಗಿ ಮರ ವಿಲೇವಾರಿ ಮಾಡಲು ಸಹಕರಿಸಿದರು ಹಾಗೂ ಊರಿನವರಾದ ಚಂದ್ರಹಾಸ, ಮಹೇಶ್ ಕುಲಾಲ್, ಸುನಿತಾ ಶ್ರೀಧರ್, ಶ್ರೀಧರ್, ಮೋಹನ್ ಮಡಿವಾಳ, ನವೀನ, ಜಯ ಮತ್ತು ಅಭಿಷೇಕ್ ಸಾಥ್ ನೀಡಿದರು.