ಕೊಕ್ಕಡ: ಪ್ರಾ. ಸ. ಸಂಘದ ಚಿನ್ನಪರಿಶೋಧಕ ದಿ. ಪದ್ಮನಾಭ ಆಚಾರ್ಯ ರವರ ಕುಟುಂಬಕ್ಕೆ ಧನಸಹಾಯ ಹಸ್ತಾಂತರ

0

ಕೊಕ್ಕಡ: ಪ್ರಾಥಮಿಕ ಸಹಕಾರಿ ಸಂಘದಲ್ಲಿ ಕೆಲವು ವರ್ಷಗಳಿಂದ ಚಿನ್ನ ಪರಿಶೋದಕರಾಗಿ ಸೇವೆ ಸಲ್ಲಿಸುತ್ತಿದ್ದು, ಪ್ರಾಮಾಣಿಕರಾಗಿ ತಮ್ಮ ಕೆಲಸವನ್ನು ನಿರ್ವಸುತ್ತಿದ್ದರು. ಇವರು ಇತ್ತೀಚಿಗೆ ಹೃದಯದ ಸಮಸ್ಯೆಯಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲಿ ನಿಧನರಾಗಿದ್ದು, ಪತ್ನಿ, 2 ಹೆಣ್ಣು ಮಕ್ಕಳು ಇವರಿಗೆ ಆಧಾರವಾಗಿದ್ದ ಪದ್ಮನಾಭ ಆಚಾರ್ಯ ನಿಧನದ ನಂತರ ಜೀವನ ತುಂಬಾ ಕಷ್ಟವಾಗಿದೆ. ಕೊಕ್ಕಡ ಪ್ರಾಥಮಿಕ ಸಹಕಾರಿ ಸಂಘದಿಂದ ಸಹಾಯಧನವನ್ನು ಮೃತರ ಪತ್ನಿಗೆ ಹಸ್ತಾಂತರಿಸಲಾಯಿತು. ಸಹಕಾರಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಕಾರ್ಯನಿರ್ವಹಣಾಧಿಕಾರಿ ನವೀನ ಕಾಯಿಲ ಮತ್ತು ವಿಠಲ ಭಂಡಾರಿ, ಶ್ರೀನಾಥ್ ಬಡಕೈಲು, ಮುತ್ತಪ್ಪ ಕೊಕ್ಕಡ, ಉದಯಕುಮಾ‌ರ್ ಆನಾರು, ಸುನಿಲ್ ಕೊಲ್ಲಾಜೆ, ಮಹಾಬಲ ಶೆಟ್ಟಿ ಪಟ್ಟೂರು, ವಿಶ್ವನಾಥ ಕಕ್ಕುದೋಳಿ, ಪ್ರೇಮ ಕಲ್ಲಾಜೆ, ರವಿ ಅಶ್ವಿನಿ ನಾಯ್ಕ ಓಣಿತಾರು, ಪದ್ಮನಾಭ ಕಾಯಿಲ, ರವಿಚಂದ್ರ ಪುಕ್ಕೇತ್ತೂರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here