ಅಂಬಾರು: ಸದಾಶಿವ ಕ್ಷೇತ್ರದಲ್ಲಿ ನಡೆದ ನವಗ್ರಹ ಸಹಿತ ಪಾರ್ವತಿ ಸ್ವಯಂವರ ಯಾಗದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಖ್ಯಾತ ದೈವ ನರ್ತಕ ಮತ್ತು ಉಪನ್ಯಾಸಕ ಡಾ. ರವೀಶ್ ಪಡುಮಲೆ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಕೊಂಡೆವೂರು ಮಠದ ಶ್ರೀಗಳಾದ ಯೋಗಾನಂದ ಸರಸ್ವತಿ ಸ್ವಾಮೀಜಿ, ಡಾ.ಸದಾಶಿವ ಶೆಟ್ಟಿ ಕುಳೂರು, ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಸದಸ್ಯೆ ಮಲ್ಲಿಕಾ ಪಕ್ಕಳ ಮಲಾರ್ ಬೀಡು ಸಹಿತ ಅನೇಕ ಗಣ್ಯರು ಉಪಸ್ಥಿತರಿದ್ದರು.