ಕನ್ಯಾಡಿ: ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ, ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಜು.12ರಂದು ಭೇಟಿ ಮಾಡಿ ಸೇವಾಧಾಮ ಮಾಡುತ್ತಿರುವ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಸಿ, ಕನ್ಯಾಡಿಯಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ನಿರ್ಮಾಣವಾಗುವ ಪುನಶ್ಚೇತನ ಕೇಂದ್ರದ ಕಟ್ಟಡಕ್ಕೆ CSR ಅನುದಾನವನ್ನು ಸಂಪರ್ಕಿಸುವಂತೆ ಮನವಿ ಮಾಡಲಾಯಿತು.
ಸಂಸ್ಥೆಯ ಸಂಸ್ಥಾಪಕ ಕೆ.ವಿನಾಯಕ ರಾವ್, ಸೇವಾಭಾರತಿ ಟ್ರಸ್ಟಿ ಜಯರಾಜ್ ಸಾಲ್ಯಾನ್ ಕಾನರ್ಪ, ಹಿರಿಯ ಪ್ರಬಂಧಕ ಚರಣ್ ಕುಮಾರ್ ಎಂ., ಕಾರ್ಯಕ್ರಮ ಸಂಯೋಜಕ ನಾಗಾರ್ಜುನ್ ಡಿ.ಎ. ಉಪಸ್ಥಿತರಿದ್ದರು.