ಉಜಿರೆ: ಕೊಯ್ಯೂರು ಗ್ರಾಮದ ಮಲೆಬೆಟ್ಟು ನಿವಾಸಿ ರಮ್ಯಾ (ವ.35)ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜು.12 ರಂದು ಮಧ್ಯಾಹ್ನ ನಡೆದಿದೆ.

ಒಂದು ವರ್ಷದಿಂದ ಮದುವೆಯಾಗಿದ್ದು ಜು.11ರಂದು ಕಾರ್ಯಕ್ರಮ ಇದೆ ಎಂದು ಗಂಡನ ಮನೆಯಿಂದ ತಾಯಿ ಮನೆಗೆ ಬಂದಿದ್ದು. ಜು.12ರಂದು ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಬೆಳ್ತಂಗಡಿ ಆಸ್ಪತ್ರೆಗೆ ರವಾನಿಸಲಾಗಿದೆ.
ಮೃತರು ಪತಿ ಲತೀಶ್, ತಂದೆ ದೇವಪಾಲ ಪೂಜಾರಿ, ತಾಯಿ ರಾಧಾ, ಸಹೋದರ ಬಾಲಚಂದ್ರ ಅವರನ್ನು ಅಗಲಿದ್ದಾರೆ.