ಧರ್ಮಸ್ಥಳ: ನಾರ್ಯ ಶ್ರೀ ಷಣ್ಮುಖ ಭಜನಾ ಮಂಡಳಿ ಸದಸ್ಯರಿಂದ ಜು. 10ರಂದು ಸುಜ್ಞಾನ ಸಮುದಾಯ ಭವನದಲ್ಲಿ ಗುರುವಂದನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಭಜನಾ ಗುರುಗಳಾದ ನಾಗೇಶ್ ಬಿ. ನೆರಿಯ ಅವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಷಣ್ಮುಖ ಭಜನಾ ಮಂಡಳಿಯ ಅಧ್ಯಕ್ಷೆ ವಿದ್ಯಾ ವಹಿಸಿದ್ದರು.



ವೇದಿಕೆಯಲ್ಲಿ ದೇಜಪ್ಪ ನಾಯ್ಕ, ದಿನೇಶ್ ಗೌಡ, ಭುವನ್, ನಿಶಾನ್ ಬಂಗೇರ ಉಪಸ್ಥಿತರಿದ್ದರು. ಗುರುಗಳಿಗೆ ಗೌರವಾರ್ಥ ಸಲ್ಲಿಸಿ ಭಜನಾ ಸದಸ್ಯರೆಲ್ಲ ಆಶೀರ್ವಾದ ಪಡೆದುಕೊಂಡರು. ಹಾಗೂ ಭಜನಾ ಸದಸ್ಯರಾದ ಶೋಭಾ, ಸ್ವಾತಿ, ಗಗನ್ ಅವರ ಹುಟ್ಟುಹಬ್ಬ ಆಚರಿಸಲಾಯಿತು. ಮಾಲಿನಿ ನಿರೂಪಿಸಿ, ಸ್ವಾಗತಿಸಿದರು. ಜ್ಯೋತಿ ವಂದಿಸಿದರು.