ಉಜಿರೆ: ಅನುಗ್ರಹ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆಯು ಜು. 12ರಂದು ಕಾಲೇಜಿನ ಆಡಿಟೋರಿಯಂನಲ್ಲಿ ಜರಗಿತು. ಸಂಸ್ಥೆಯ ಸಂಚಾಲಕ ಫಾ. ಅಬೆಲ್ ಲೋಬೊ ಉದ್ಘಾಟಿಸಿ ನೂತನ ವಿದ್ಯಾರ್ಥಿ ಸಂಘಕ್ಕೆ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ವಾಣಿ ಪದವಿ ಕಾಲೇಜಿನ ಗಣಕ ಶಾಸ್ತ್ರ ವಿಭಾಗದ ಮುಖ್ಯಸ್ಥ ಸುಧಿರ್ ಕೆ.ಎನ್. ಮಾತನಾಡಿ ನಾಯಕನಾದವನು ತಪ್ಪುಗಳನ್ನು ತನ್ನಮೇಲೆ ಹೊತ್ತುಕೊಂಡು ಶ್ರೇಯಸ್ಸನ್ನು ಎಲ್ಲರಿಗೂ ಕೊಡುತ್ತಾನೆ ಎಂದು ಹೇಳಿ, ವಿದ್ಯಾರ್ಥಿಗಳಿಗೆ ನಾಯಕತ್ವದ ಉಪಯೋಗ ಹಾಗೂ ವ್ಯಕ್ತಿತ್ವ ವಿಕಾಸನದ ಬಗ್ಗೆ ಮಾಹಿತಿ ನೀಡಿ ಶುಭಹಾರೈಸಿದರು.
ಕಾಲೇಜಿನ ಪ್ರಾಂಶುಪಾಲ ಫಾ. ವಿಜಯ್ ಲೋಬೊ ನೂತನ ವಿದ್ಯಾರ್ಥಿ ನಾಯಕರಿಗೆ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು. ವಿದ್ಯಾರ್ಥಿ ಸೆಬಾಸ್ಟಿನ್ ಸ್ವಾಗತಿಸಿದರು. ವಿಶ್ವಾಸ್ ವೇಗಸ್ ಕಾರ್ಯಕ್ರಮ ನಿರೂಪಿಸಿದರು. ನಾಡಗೀತೆಯೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು. ವಿದ್ಯಾರ್ಥಿ ಸಂಘದ ನಾಯಕಿ ಹೆಝಲ್ ಜಿಷಾ ಪಿಂಟೋ ಧನ್ಯವಾದ ನೀಡಿದರು.