ಪಡಂಗಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ರಕ್ಷಣಾ (ಸೆಕ್ಯೂರಿಟಿ) ಕೊಠಡಿಯನ್ನು ಶಾಸಕ ಹರೀಶ್ ಪೂಂಜ ಅವರು ಜು. 12ರಂದು ಉದ್ಘಾಟಿಸಿದರು.
ಹಿರಿಯರಾದ ಈಶ್ವರ ಭಟ್ ಅವರು ದೀಪ ಪ್ರಜ್ವಲಿಸಿ ಶುಭ ಕೋರಿದರು. ಪಡಂಗಡಿ ಸಹಕಾರಿ ಸಂಘದ ಅಧ್ಯಕ್ಷ ಅಂತೋನಿ ಫೆರ್ನಾಂಡೀಸ್ ಅವರಿಗೆ ಭದ್ರತಾ ಸಿಬ್ಬಂದಿ ಕೊಠಡಿಯ ಕೀ ಹಸ್ತಾಂತರಿಸಿದರು.
ಪಡಂಗಡಿ ಸಹಕಾರಿ ಸಂಘದ ಉಪಾಧ್ಯಕ್ಷ ನರೇಂದ್ರ ಕುಮಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಕೇಶಿನಿ ಎ., ನಿರ್ದೇಶಕ ನಾರಾಯಣ ಮೂಲ್ಯ, ಸಂತೋಷ್ ಶೆಟ್ಟಿ, ರವಿ ಕುಮಾರ್ ಕೆ.ವೈ, ರಾಮು, ಪದ್ಮನಾಭ ನಾಯ್ಕ, ಕೃಷ್ಣಪ್ಪ ಪೂಜಾರಿ, ಉಮೇಶ, ಉಷಾ, ಸುನಂದ, ನವೀನ್, ಪಡಂಗಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ಜೈನ್ ಹಾಗೂ ಸಹಕಾರಿ ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು.