ಕಳೆಂಜ: ಧರ್ಮಸ್ಥಳ ಕಾಯರ್ತಡ್ಕ- ಶಿಶಿಲ ರೂಟ್ ಬಸ್ ಹಾಗೂ ಕಾರ್ಯಾತಡ್ಕ – ಶಿಬರಾಜೆ ಪಾದೆ – ಮುದ್ದಿಗೆ ಮೂಲಕ -ಕೊಕ್ಕಡ -ಉಪ್ಪಿನಂಗಡಿ -ಪುತ್ತೂರು ಹೊಸದಾಗಿ ರೂಟ್ ಬಸ್ ಪ್ರಾರಂಬಿಸಬೇಕೆಂದು ಕಳೆಂಜ ಕಾಂಗ್ರೆಸ್ ಗ್ರಾಮ ಸಮಿತಿಯವರು ಜು. 11ರಂದು ಧರ್ಮಸ್ಥಳ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು. ಈ ಭಾಗದಲ್ಲಿ 8000ಕ್ಕೂ ಹೆಚ್ಚಿನ ಜನಸಂಖ್ಯೆ ಇದ್ದು ಮಕ್ಕಳು ವಿದ್ಯಾಭ್ಯಾಸ ಕ್ಕೇoದು ಉಪ್ಪಿನಂಗಡಿ ನೆಲ್ಯಾಡಿ ಭಾಗಕ್ಕೆ ತೆರಳುತ್ತಾರೆ ಆದ್ದರಿಂದ ಆದಷ್ಟು ಬೇಗ ತಮ್ಮ ಮನವಿಯನ್ನು ಪರಿಗಣಿಸಬೇಕೆಂದು ಬೆಳ್ತಂಗಡಿ ತಾಲೂಕು ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಪಿ.ಟಿ ಸಭಾಸ್ಟಿನ್ ಡಿಪ್ಪೋ ಮ್ಯಾನೇಜರ್ ಬಳಿ ವಿನಂತಿಸಿದ್ದಾರೆ.
ಗ್ರಾಮ ಪಂಚಾಯತ್ ಸದಸ್ಯರಾದ ನಿತ್ಯಾನಂದ ರೈ, ಪ್ರೇಮ ಬಿ.ಎಸ್. ಮತ್ತು ಊರ ಪ್ರಮುಖರಾದ ಶ್ರೀಧರ್ ರಾವ್, ಶರತ್ ಮೂಡಾರು, ಅಶೋಕ್ ಭಟ್ ಕಾಯಡ, ಜಯವರ್ಮ ಜೈನ್ ಶಿಬರಾಜೆ, ಕೇಶವ ಗೌಡ
ಮಲ್ಲಜಾಲು ಉಪಸ್ಥಿತರಿದ್ದರು.