ಬೆಳ್ತಂಗಡಿ: ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿರವರ ಹುಟ್ಟುಹಬ್ಬವನ್ನು ಅಭಿಮಾನಿ ಬಳಗದಿಂದ ಮಂಗಳೂರಿನ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಜು.9ರಂದು ಆಚರಿಸಲಾಯಿತು. ಅಭಿಮಾನಿ ಬಳಗದ ಪ್ರಮುಖರಾದ ನಂದೇಶ್ ಗೌಡ ನಾಗನಮಜಲು, ಯುಕೇಶ್ ಪಟ್ರಮೆ, ವಿಶ್ವನಾಥ್ ಹೇರ, ಗಣೇಶ್ ಹೇರ, ಸಂದೇಶ್ ಗೌಡ ಮೀನಾಡಿ, ಶ್ರೀಕಾಂತ ಕೊಣಾಜೆ, ಪವನ್ ಕೇದಿಗೆಬನ ಮತ್ತಿತರರು ಉಪಸ್ಥಿತರಿದ್ದರು.

ಪ್ರತಾಪಸಿಂಹ ಶುಭ ಹಾರೈಕೆ: ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಫೇಸ್ಬುಕ್ ಮೂಲಕ ಕಿರಣಚಂದ್ರ ಅವರಿಗೆ ಶುಭ ಕೋರಿದ್ದಾರೆ. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ನಾಯಕರಾದ ಶ್ರೀ ಕಿರಣ್ ಚಂದ್ರ ಡಿ. ಪುಷ್ಪಗಿರಿ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ತಾಯಿ ಚಾಮುಂಡೇಶ್ವರಿಯು ತಮಗೆ ಆರೋಗ್ಯ, ಆಯಸ್ಸು, ಸುಖ ಶಾಂತಿ, ನೆಮ್ಮದಿ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಪ್ರತಾಪಸಿಂಹ ತಿಳಿಸಿದ್ದಾರೆ.