ನಾವೂರು ರಸ್ತೆಗೆ ಬಿದ್ದ ಮರ: ತಕ್ಷಣ ಸ್ಪಂದಿಸಿದ ಗ್ರಾಮ ಪಂಚಾಯತ್

0

ನಾವೂರು: ಜು.8ರಂದು ರಾತ್ರಿ ಸುರಿದ ಭಾರಿ ಮಳೆಗೆ ನಿoರ್ದಿ ರಸ್ತೆ ಬದಿಯ ಮರ ಬೆಳ್ತಂಗಡಿ – ಕಿಲ್ಲೂರು ರಸ್ತೆಗೆ ಅಡ್ಡ ಬಿದ್ದು ವಾಹನ ಸಂಚರಕ್ಕೆ ತೊಂದರೆಯಾಗಿತ್ತು. ವಿಷಯ ತಿಳಿದ ತಕ್ಷಣ ಗ್ರಾಮ ಪಂಚಾಯತ್ ಮರ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಗಣೇಶ್ ಗೌಡ ನಾವೂರು ಹಾಗೂ ಪಂಚಾಯತ್ ಸದಸ್ಯರಾದ ಹಸೈನಾರ್, ಸ್ಥಳೀಯರಾದ ಎ.ಕೆ. ಅಬ್ವಸ್, ಸತೀಶ್ ಸುವರ್ಣ, ಮಾಧವ ಗೌಡ ಒಳಗುಡ್ಡೆ, ಹಮೀದ್ ನಿoರ್ದಿ ಅವರು ಮರವನ್ನು ತೆರವುಗೊಳಿಸಲು ಸಹಕರಿಸಿದರು. ಸಾಲುಗಟ್ಟಿ ನಿಂತ ವಾಹನಗಳನ್ನು ಬದಲಿ ರಸ್ತೆಗಳಾದ ನವಗ್ರಮ ಜನತಾ ಕಾಲನಿ ಹಾಗೂ ಪಾಲೇದಬೆಟ್ಟು – ನಾವೂರು ರಸ್ತೆಯಲ್ಲಿ ಕಳಿಸಲಾಯಿತು.

ರಸ್ತೆ ಬದಿಯಲ್ಲಿ ಹಲವಾರು ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಗೆ ಈಗಾಗಲೇ ಗ್ರಾಮ ಪಂಚಾಯತ್ ನಿಂದ ಮನವಿ ಮಾಡಿದ್ದು, ಮರ ತೆರವುಗೊಳಿಸಲು ಅನುಮತಿ ನೀಡಿರುತ್ತಾರೆ. ಸಾರ್ವಜನಿಕರಿಗೆ ತೊಂದರೆ ಆಗುವ ಮೊದಲು ಮರ ತೆರವುಗೊಳಿಸಿ ಮುಂದೆ ನಡೆಯುವ ಅನಾಹುತವನ್ನು ತಪ್ಪಿಸಬೇಕಾಗಿ ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ಇಲಾಖೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here