ಬೆಳ್ತಂಗಡಿ: ಜೆಸಿಐ ಬೆಳ್ತಂಗಡಿಯ ವತಿಯಿಂದ ಘಟಕದ ಅಧ್ಯಕ್ಷೆ ಜೇಸಿ ಆಶಾಲತಾ ಪ್ರಶಾಂತ್ ಅವರ ಮುಂದಾಳತ್ವದಲ್ಲಿ ವೇಣೂರು ಸಮೀಪದ ಗುರು ಚೈತನ್ಯ ಸೇವಾಶ್ರಮಕ್ಕೆ ಸುಮಾರು 12 ಸಾವಿರ ಮೌಲ್ಯದ ಒಂದು ತಿಂಗಳ ದಿನಸಿ ಸಾಮಗ್ರಿಯನ್ನು ಜು.2ರಂದು ಹಸ್ತಾಂತರಿಸಲಾಯಿತು.


ಈ ಸೇವಾ ಕಾರ್ಯಕ್ಕೆ ಜೆಸಿಐ ಬೆಳ್ತಂಗಡಿಯ ಪೂರ್ವಾಧ್ಯಕ್ಷರು ಸದಸ್ಯರು ಕೊಡುಗೆಗಳನ್ನು ನೀಡುವುದರ ಮೂಲಕ ಕೈಜೋಡಿಸಿದ್ದರು. ಸೇವಾಶ್ರಮದ ಮುಖ್ಯಸ್ಥರು ಸಿಬ್ಬಂದಿಗಳು ಜೆಸಿಐ ಬೆಳ್ತಂಗಡಿಯ ಪೂರ್ವ ಅಧ್ಯಕ್ಷ ಪ್ರಶಾಂತ್ ಲಾೖಲ, ಜೂನಿಯರ್ ಜೇಸಿ ನಿರ್ದೇಶಕ ಪೃಥ್ವಿರಾಜ್ ಜೈನ್ ಡಿ., ಕಾರ್ಯದರ್ಶಿ ಪ್ರಮೋದ್ ಕೆ., ಕೋಶಾಧಿಕಾರಿ ರಕ್ಷಿತ್ ಅಂಡಿಂಜೆ ಸದಸ್ಯರಾದ ಸುದೀಪ್ ಸಾಲ್ಯಾನ್ ಉಪಸ್ಥಿತರಿದ್ದರು.