ಕುಕ್ಕೇಡಿ: ಶ್ರೀ ಶಾರದಾಂಭ ಭಜನಾ ಮಂಡಳಿ, ಶಾರದಾ ನಗರ ಬುಳೆಕ್ಕಾರ ಇದರ ವಾರ್ಷಿಕ ಮಹಾಸಭೆ ಭಜನಾ ಮಂಡಳಿಯ ಅಧ್ಯಕ್ಷ ಹರೀಶ್ ಬಂಗೇರರ ಅಧ್ಯಕ್ಷತೆಯಲ್ಲಿ ನಡೆಯಿತು. ಕುಕ್ಕೇಡಿ ಗ್ರಾಮ ಪಂಚಾಯತ್ ಸದಸ್ಯ ಗೋಪಾಲ ಶೆಟ್ಟಿ, ಪುರಿಯ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕಸತೀಶ್ ಬಂಗೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗೌರವಾಧ್ಯಕ್ಷರಾಗಿ ರಾಜೇಶ್ ಜೈನ್ ಬುಳೆಕ್ಕಾರ ಬೀಡು, ಕಾರ್ಯಾಧ್ಯಕ್ಷ ರಾಗಿ ಗೋಪಾಲ ಶೆಟ್ಟಿ, ಅಧ್ಯಕ್ಷರಾಗಿ ಚಂದ್ರ ಹಾಸ ಪೂಜಾರಿ, ಪ್ರಧಾನ ಕಾರ್ಯದರ್ಶಿ ಯಾಗಿ ರಕ್ಷಿತ್ ಪಾದೆ, ಕಾರ್ಯದರ್ಶಿಯಾಗಿ ನಿತೀಶ್ ಮಂಗತ್ಯಾರು, ಕೋಶಾಧಿಕಾರಿಯಾಗಿ ಗಣೇಶ್ ಕೊಪ್ಪಳ,ಭಜನಾ ಸಂಚಾಲಕರಾಗಿ ನಿತಿನ್ ಮಂಗತ್ಯಾರ್, ಜತೆ ಕಾರ್ಯದರ್ಶಿ ಯಾಗಿ ಪ್ರವೀಣ್ ಕೊಪ್ಪಳ, ಉಪಾಧ್ಯಕ್ಷರಾಗಿ ಕೃಷ್ಣಪ್ಪ ದೇವಾಡಿಗ, ಜಗದೀಶ್ ದರ್ಬೆ, ಲೆಕ್ಕ ಪರಿಶೋಧಕರಾಗಿ ಸತೀಶ್ ಬಂಗೇರ ದಾನ, ಗೌರವ ಸಲಹೆಗಾರರಾಗಿ ಹರೀಶ್ ಬಂಗೇರ, ಸುಂದರ ದೇವಾಡಿಗ, ನಾರಾಯಣ ನಾಯ್ಕ, ವಿಶ್ವನಾಥ ದೇವಾಡಿಗಹಾಗೂ 22 ಮಂದಿಯನ್ನು ಸದಸ್ಯರನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು. ಜಗದೀಶ್ ದರ್ಬೆ ಕಾರ್ಯಕ್ರಮ ನಿರೂಪಿಸಿದರು ಪ್ರವೀಣ್ ಪೂಜಾರಿ ಸ್ವಾಗತಿಸಿ, ಸುದೀಪ್ ಕುಮಾರ್ ವಂದಿಸಿದರು.