ಶ್ರೀ ಧ.ಮಂ.ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಯಕ್ಷಗಾನ ಸೆಮಿ ಕ್ಲಾಸಿಕಲ್ ನಾಟಕ ಪಾಶ್ಚಾತ್ಯ ನೃತ್ಯ ತರಬೇತಿಗಳ ಉದ್ಘಾಟನಾ ಸಮಾರಂಭ

0

ಧರ್ಮಸ್ಥಳ: ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಕಲಾ ಕೇಂದ್ರದ ಸಹಯೋಗದಲ್ಲಿ ನಾಟಕ ಯಕ್ಷಗಾನ ಸೆಮಿ ಕ್ಲಾಸಿಕಲ್ ಹಾಗೂ ಪಶ್ಚಿಮಾತ್ಯ ಶೈಲಿಯ ನೃತ್ಯ ತರಬೇತಿಯ ಉದ್ಘಾಟನಾ ಸಮಾರಂಭ ನೆರವೇರಿತು.

ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಕಲಾ ಕೇಂದ್ರದ ಸಂಚಾಲಕ ತೃಪ್ತ ಅವರು ಆಗಮಿಸಿ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಕಲಾಕೇಂದ್ರದಿಂದ ನಿರ್ವಹಿಸುವ ಈ ತರಬೇತಿಯ ಸದುಪಯೋಗಪಡಿಸಿಕೊಳ್ಳಿ, ಹಾಗೂ ಈ ಎಲ್ಲಾ ತರಬೇತಿಗಳ ಪ್ರಯೋಜನ ಏನು ಇತ್ಯಾದಿ ವಿಚಾರಗಳನ್ನು ತಿಳಿಯಪಡಿಸಿದರು. ಬಳಿಕ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ.ವಿ. ಅವಕಾಶವನ್ನು ಬಳಸುವ ಬಗ್ಗೆ, ಪ್ರತಿಭೆಗೆ ನೀರೆರೆದು ಪೋಷಿಸುವ ಬಗ್ಗೆ, ಪಠ್ಯೇತರ ಚಟುವಟಿಕೆಗಳ ಅಗತ್ಯ ಹಾಗೂ ಅವುಗಳ ಪ್ರಯೋಜನ, ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಗತ್ಯಗಳನ್ನು ವಿವರಿಸಿದರು. ಈ ಕಾರ್ಯಕ್ರಮದಲ್ಲಿ ಯಕ್ಷಗಾನ ತರಬೇತಿದಾರರಾಗಿ ಅರುಣ್ ಕುಮಾರ್, ನಾಟಕ ತರಬೇತಿದಾರರಾಗಿ ಯಶವಂತ್ ಬೆಳ್ತಂಗಡಿ, ಪಾಶ್ಚಿಮಾತ್ಯ ನೃತ್ಯ ತರಬೇತಿದಾರರಾಗಿ ವಿನ್ಯಾಸ್, ಸೆಮಿ ಕ್ಲಾಸಿಕಲ್ ನೃತ್ಯ ತರಬೇತುದಾರರಾಗಿ ಚೈತ್ರ, ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ತೇಜಸ್ ನಿರ್ವಹಿಸಿದ ಈ ಕಾರ್ಯಕ್ರಮದಲ್ಲಿ ಅನುಜ್ಞಾ ಸ್ವಾಗತಿಸಿ, ಕುಮಾರಿ ಕಲ್ಪಿತ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here