ಫೇಸ್‌ಬುಕ್‌ ನಲ್ಲಿ ಅಶ್ಲೀಲ ಪದ ಬಳಕೆ: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

0

ಧರ್ಮಸ್ಥಳ: ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ ವಿಜಯ ವಿಜಿ ಎಂಬ ಖಾತೆಯಲ್ಲಿ ಅಶ್ಲೀಲವಾಗಿ ಪದಬಳಕೆ ಮಾಡಿದ್ದಾರೆ ಎಂದು ಧರ್ಮಸ್ಥಳ ಪೋಲಿಸ್ ಠಾಣೆಯಲ್ಲಿ ಜು.1ರಂದು ಪ್ರಕರಣ ದಾಖಲಾಗಿದೆ.

ಪ್ರಕರಣದ ಸಾರಾಂಶ: ಧರ್ಮಸ್ಥಳ ಗ್ರಾಮದ ದೊಂಡೋಲೆ ನಿವಾಸಿ ಆಟೋರಿಕ್ಷಾ ಚಾಲಕ ರಮೇಶ್ ಎಂಬ ವ್ಯಕ್ತಿ ಮಾಹಿತಿ ಕಚೇರಿಯ ಬಳಿ ತನ್ನ ವಾಹನದಲ್ಲಿ ಫೇಸ್ ಬುಕ್ ಖಾತೆಯನ್ನು ಓಪನ್ ಮಾಡಿ ನೋಡಿದಾಗ ಅಶ್ಲೀಲ ಪದ ಬಳಕೆ ಮಾಡಿ , ಇನ್ನು ಉಳಿದಿರೋ ದಾರಿ ಒಂದೇ ಕಾನೂನು ನಮ್ಮ ಕೈಗೆ ತಗೊಳೋದು, ಜೈ ಅಣ್ಣಪ್ಪ ಮಂಜುನಾಥ , ಎಂದು ಸಾರ್ವಜನಿಕವಾಗಿ ಎಲ್ಲರೂ ಬಳಸುವ ಫೇಸ್ಬುಕ್ ಖಾತೆಯಲ್ಲಿ ಇಂತಹ ಪದ ಬಳಕೆ ಮಾಡಿದ ಖಾತೆಯ ವಿರುದ್ಧ ರಮೇಶ್ ನೀಡಿದ ದೂರಿನ ಮೇಲೆ ಧರ್ಮಸ್ಥಳ ಪೋಲಿಸರು ಪ್ರಕರಣದ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here