ಗುರುವಾಯನಕೆರೆ: ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ಉಪನ್ಯಾಸಕರಗಳ ಸ್ಟಡಿ ಮೆಟೀರಿಯಲ್ ಗಳನ್ನು ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ ಅವರು ಬಿಡುಗಡೆ ಮಾಡಿದರು. ವಾಣಿಜ್ಯ ವಿಭಾಗದ ಡೀನ್ ಸಂತೋಷ್ ಕೆ.ಕೆ. ಅವರ ಸಂಪಾದನೆಯ, ಆರ್ಥಿಕ ವಿಜ್ಞಾನ, ಉಪನ್ಯಾಸಕ ಅರುಣ್ ಕ್ಯಾಸ್ಟೋಲಿನೋ ಅವರ ವ್ಯವಹಾರ ಅಧ್ಯಯನ ಮತ್ತು ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರಸನ್ನ ಭೋಜರಾಜ್ ಅವರ ಲೆಕ್ಕ ವಿಜ್ಞಾನ ಪುಸ್ತಕಗಳ ಬಿಡುಗಡೆಯನ್ನು ಮಾಡಲಾಯಿತು.

ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನವೀನ್ ಕುಮಾರ್ ಮರಿಕೆ ಶುಭ ಕೋರಿದರು. ವಿದ್ಯಾರ್ಥಿಗಳಾದ ಅಭಿಷ್ಟಾ ಸ್ವಾಗತಿಸಿ, ಯಾನಾ ಪೊನ್ನಮ್ಮ ಮತ್ತು ಯುಕ್ತಿ ಗೌಡ ನಿರ್ವಹಿಸಿದರು. ದಿಯಾ ವಂದಿಸಿದರು.