ಬೆಳ್ತಂಗಡಿ: ಇತ್ತೀಚೆಗೆ ನಿಧನರಾದ ಬೆಳ್ತಂಗಡಿ ಸಿ.ಎ. ಬ್ಯಾಂಕ್ ಮಾಜಿ ಅಧ್ಯಕ್ಷ ಕಾಂಗ್ರೆಸ್ ಹಿರಿಯ ಮುಖಂಡ ಪ್ರಮೋದ್ ಕುಮಾರ್ ನೂಜೋಡಿ ಮನೆಗೆ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು.
ಪ್ರಮೋದ್ ಕುಮಾರ್ ಪತ್ನಿ ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷೆ ಸುಮತಿ ಪ್ರಮೋದ್, ಪುತ್ರ ಸಚಿನ್ ಕುಮಾರ್, ಯುವ ಬಿಲ್ಲವ ವೇದಿಕೆಯ ಅಧ್ಯಕ್ಷ ಎಮ್.ಕೆ.ಪ್ರಸಾದ್, ಯುವವಾಹಿನಿ ಅಧ್ಯಕ್ಷ ಗುರುರಾಜ್ ಗುರುಪಳ್ಳ, ಬಿಲ್ಲವ ಮಹಿಳಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಶಾಂಭವಿ ಬಂಗೇರ, ಸೌಮ್ಯ ಲಾಯಿಲ ಯುವ ಕಾಂಗ್ರೆಸ್ ಮುಖಂಡ ರಾಘವೇಂದ್ರ ಮೇಲಂತಬೆಟ್ಟು ಉಪಸ್ಥಿತರಿದ್ದರು.