ಮಡಂತ್ಯಾರಿನಲ್ಲಿ ಪಾಲಕ ಪರಿಶುದ್ಧ ಯೇಸು ಹೃದಯದ ಹಬ್ಬ

0

ಮಡಂತ್ಯಾರು: ಪರಿಶುದ್ಧ ಹೃದಯದ ಧರ್ಮಕೇಂದ್ರದಲ್ಲಿ ಪಾಲಕ ಪರಿಶುದ್ಧ ಯೇಸು ಹೃದಯದ ಹಬ್ಬ ಜೂ. 27ರಂದು ಶ್ರದ್ಧೆ, ಭಕ್ತಿ ಮತ್ತು ಸಮುದಾಯದ ಒಕ್ಕೂಟದೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು.
ಪ್ರಧಾನ ಯಜಕರಾಗಿ ನಾರಾವಿ ಚರ್ಚ್ ಧರ್ಮಗುರು ಜೆರೋಮ್ ಡಿಸೋಜಾ ಅವರು ಬಲಿಪೂಜೆಯನ್ನು ಅರ್ಪಿಸಿದರು. ತಮ್ಮ ಉಪದೇಶದಲ್ಲಿ ಅವರು ಪರಿಶುದ್ಧ ಯೇಸು ಹೃದಯ ನಮ್ಮ ಹೃದಯದೊಂದಿಗೆ ಎಂಬ ಆಧ್ಯಾತ್ಮಿಕ ಚಿಂತನೆಯನ್ನು ಹಂಚಿಕೊಂಡು, ಕ್ರಿಸ್ತನ ಪ್ರೀತಿಯ ಹೃದಯವನ್ನು ನಮ್ಮ ಜೀವನದಲ್ಲಿ ಪ್ರತಿಬಿಂಬಿಸಲು ಕರೆಯಲ್ಪಟ್ಟಿರುವೆವು ಎಂಬ ಸಂದೇಶ ನೀಡಿದರು. ವಲಯದ ಧರ್ಮಗುರುಗಳು, ಧರ್ಮಭಾಗಿನಿಯರು ಮತ್ತು ಧರ್ಮಕೇಂದ್ರದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಹಬ್ಬವನ್ನು ಭಕ್ತಿಪೂರ್ವಕವಾಗಿ ಆಚರಿಸಿದರು.

ಚರ್ಚ್ ಗಾಯನ ಮಂಡಳಿ ಭಕ್ತಿಭರಿತ ಗಾಯನದ ಮೂಲಕ ಪೂಜೆಗೆ ಆತ್ಮೀಯ ಶೋಭೆ ನೀಡಿತು. ದಾನಿಗಳು ಮತ್ತು ಮುರ್ದೋಂ ದಾನಿಗಳು ಅವರಿಗೆ ಮೊಂಬತ್ತಿ ನೀಡಿ ಗೌರವಿಸಲಾಯಿತು. ಸನ್ಮಾನವನ್ನು ಧರ್ಮಕೇಂದ್ರದ ಸ್ಟ್ಯಾನಿ ಗೋವಿಯಸ್ ಅವರು ನೆರವೇರಿಸಿದರು. ಸಹಾಯಕ ಧರ್ಮಗುರು ಲ್ಯಾರಿ ಪಿಂಟೋ ಪೂಜೆಯ ಅಂತ್ಯದಲ್ಲಿ ಎಲ್ಲರ ಸಹಕಾರ ಮತ್ತು ಸೇವೆಗೆ ಕೃತಜ್ಞತಾಪೂರ್ವಕ ವಂದನೆಗಳನ್ನು ಸಲ್ಲಿಸಿದರು.

LEAVE A REPLY

Please enter your comment!
Please enter your name here