ಶಿಶಿಲ: ವರುಣನ ಆರ್ಭಟ ಶಿಶಿಲ ದೇವಸ್ಥಾನ ಜಲಾವೃತ-ಗರ್ಭಗುಡಿಯೊಳಗೆ ನುಗ್ಗಿದ ನೀರು-ದೇವಳದ ಪಕ್ಕದಲ್ಲಿರುವ ಅಂಗಡಿ ಜಲಾವೃತ

0

ಶಿಶಿಲ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಪಿಲಾ ನದಿಯಲ್ಲಿ ಪ್ರವಾಹ ಉಂಟಾಗಿ ಶಿಶಿಲೇಶ್ವರ ದೇವಾಲಯಕ್ಕೆ ನೀರು ನುಗ್ಗಿದೆ. ನೀರು ಗರ್ಭಗುಡಿ ಪ್ರವೇಶಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಪಕ್ಕದಲ್ಲೇ ಇರುವ ಕಿಂಡಿ ಆಣೆಕಟ್ಟು (ದೇವಳದ ಸಂಪರ್ಕ ರಸ್ತೆ) ನೀರಿನಿಂದ ಸಂಪೂರ್ಣ ಮುಳುಗಡೆ ಗೊಂಡಿದ್ದು ಸದ್ಯಕ್ಕೆ ಅಲ್ಲಿರುವ ತೂಗು ಸೇತುವೆ ವರೆಗೂ ನೀರು ಹರಿಯುತ್ತಿದೆ ಎಂಬ ಮಾಹಿತಿ ಸುದ್ದಿ ನ್ಯೂಸ್ ಗೆ ದೊರಕಿದೆ. ನೀರು ಪ್ರವಾಹದ ರೀತಿ ಹರಿಯುತ್ತಿರುವುದರಿಂದ ಆ ಭಾಗದ ಜನರಿಗೆ ಸಂಚಾರಕ್ಕೆ ಕಷ್ಟವಾಗುತ್ತಿದೆ ಎಂದು ಪಂಚಾಯತ್ ಅಧ್ಯಕ್ಷ ಸುಧೀನ್ ಡಿ. ಸುದ್ದಿ ನ್ಯೂಸ್ ಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here