
ಬೆಳ್ತಂಗಡಿ: ಬಂಟರ ಮಹಿಳಾ ವಿಭಾಗ ಅಗಸ್ಟ್ 8 ರಂದು ಸಾಮೂಹಿಕ ವರಮಹಾಲಕ್ಷ್ಮಿ ವ್ರತ ಆಯೋಜನೆ ಮಾಡಿದೆ.
ಬಂಟರ ಭವನದಲ್ಲಿ ಬಂಟರ ಮಹಿಳಾ ವಿಭಾಗದಿಂದ ನಡೆಯುವ ವರಮಹಾಲಕ್ಷ್ಮಿ ವ್ರತದ ಆಮಂತ್ರಣ ಪತ್ರಿಕೆಯನ್ನು ಜೂ. 22 ರಂದು ಬಂಟರ ಭವನದಲ್ಲಿ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷರಾದ ಜಯಂತ್ ಶೆಟ್ಟಿ ಭಂಡಾರಿಗುಡ್ಡೆ ಬಿಡುಗಡೆ ಮಾಡಿದರು.
ಗುರುವಾಯನಕೆರೆ ಯಲ್ಲಿರುವ ಬಂಟರ ಭವನದಲ್ಲಿ ಬೆಳಗ್ಗೆ 9.30 ಗಂಟೆಗೆ ನಡೆಯಲಿರುವ ವರಮಹಾಲಕ್ಷ್ಮಿ ವ್ರತದಲ್ಲಿ ಬೆಳ್ತಂಗಡಿ ತಾಲೂಕಿನ ಬಂಟ ಸಮಾಜದ ಪ್ರತಿಯೊಬ್ಬ ಮಹಿಳೆಯು ಪಾಲ್ಗೊಳ್ಳುವಂತೆ ಬಂಟರ ಮಹಿಳಾ ವಿಭಾಗದ ಅಧ್ಯಕ್ಷ ಜಯಲಕ್ಷ್ಮಿ ಸಾಮಾನಿ ಕರಂಬಾರುಬೀಡು ಕಾರ್ಯಕ್ರಮದಲ್ಲಿ ಕೇಳಿಕೊಂಡರು

.
ಈ ಸಂದರ್ಭದಲ್ಲಿ ಬಂಟರ ಯಾನೆ ನಾಡವರ ಸಂಘದ ಉಪಾಧ್ಯಕ್ಷರಾದ ನವೀನ್ ಸಾಮಾನಿ ಕರಂಬಾರುಬೀಡು, ನಿಕಟ ಪೂರ್ವ ಅಧ್ಯಕ್ಷರಾದ ಜಯರಾಮ್ ಶೆಟ್ಟಿ ಮುಂಡಾಡಿಗುತ್ತು, ಕಾರ್ಯದರ್ಶಿ ಸುರೇಶ್ ಶೆಟ್ಟಿ ಲಾಯಿಲ, ಕೋಶಾಧಿಕಾರಿ ವಸಂತ್ ಶೆಟ್ಟಿ ಶ್ರಧ್ಧಾ, ಜತೆ ಕಾರ್ಯದರ್ಶಿ ಕಿರಣ್ ಕುಮಾರ್ ಶೆಟ್ಟಿ, ಮಾತೃ ಸಂಘದ ಸಂಚಾಲಕ ಜಯರಾಮ್ ಭಂಡಾರಿ, ಯುವ ವಿಭಾಗ ಅಧ್ಯಕ್ಷ ಪ್ರತೀಕ್ ಶೆಟ್ಟಿ ನೊಚ್ಚ, ಬಂಟರ ಸಂಘದ ಮಾಜಿ ಅಧ್ಯಕ್ಷ ರಘುರಾಮ್ ಶೆಟ್ಟಿ ಸಾಧನ, ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ಹಾಗೂ ಬಂಟರ ಸಂಘದ ನಿರ್ದೇಶಕರಾದ ಜಯಂತ್ ಶೆಟ್ಟಿ ಕುಂಠಿಣಿ, ನಿರ್ದೇಶಕರುಗಳಾದ ವಿಠಲ್ ಶೆಟ್ಟಿ ಕೊಲ್ಲೊಟ್ಟು, ಭಾಸ್ಕರ ಶೆಟ್ಟಿ ಕಾರ್ಯಾಣ, ರಾಜು ಶೆಟ್ಟಿ ಬೆಂಗತ್ಯಾರು, ರವೀಂದ್ರ ಶೆಟ್ಟಿ ಬಳಂಜ, ಪ್ರಶಾಂತ್ ಶೆಟ್ಟಿ ಮೂಡಾಯೂರು, ಪುರಂದರ ಶೆಟ್ಟಿ ಪಣೆಕ್ಕರ, ಶಿವಪ್ರಸಾದ್ ಶೆಟ್ಟಿ ಆರಂಭೋಡಿ, ರಮೇಶ್ ಶೆಟ್ಟಿ ಪಡ್ಡನ್ತಡ್ಕ, ಸಂಚಾಲಕಿ ಶೋಭಾ ವಿ ಶೆಟ್ಟಿ, ಉಪಾಧ್ಯಕ್ಷೆ ಸಂಗೀತ ಶೆಟ್ಟಿ, ಕಾರ್ಯದರ್ಶಿ ಶ್ರೇಯಾ ಶೆಟ್ಟಿ, ಕೋಶಾಧಿಕಾರಿ ರಕ್ಷಿತಾ ಶೆಟ್ಟಿ, ನಿರ್ದೇಶಕಿಯರಾದ ಅಶ್ವಿನಿ ಶೆಟ್ಟಿ, ರಂಜಿತಾ ಶೆಟ್ಟಿ, ಪ್ರಿಯಾ ಶೆಟ್ಟಿ, ವಸುಧಾ ಶೆಟ್ಟಿ, ವಿಂದ್ಯಾ ಶೆಟ್ಟಿ, ಉಷಾ ಶೆಟ್ಟಿ, ಸುಜಾತ ಶೆಟ್ಟಿ ಪೆರಿಂಜೆ, ಪವಿತ್ರಾ ಶೆಟ್ಟಿ, ಸಂಸ್ಕೃತಿ ಶೆಟ್ಟಿ, ಸ್ವಾತಿ ಶೆಟ್ಟಿ, ಶುಭಾ ಶೆಟ್ಟಿ, ಕಚೇರಿ ಕಾರ್ಯ ನಿರ್ವಾಹಕರಾದ ಸರಿತಾ ಶೆಟ್ಟಿ, ಸದಾಶಿವ ಶೆಟ್ಟಿ ಉಪಸ್ಥಿತರಿದ್ದರು.