ಜೂ.15: ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್ ನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

0

ಬೆಳ್ತಂಗಡಿ: ಹೋಲಿ ರಿಡೀಮರ್ ಚರ್ಚ್ ಬೆಳ್ತಂಗಡಿ, ಫಾದರ್ ಮುಲ್ಲರ್ ಆಸ್ಪತ್ರೆ, ಮಂಗಳೂರು, ಫಾ. ಎಲ್. ಎಂ. ಪಿಂಟೊ ಆಸ್ಪತ್ರೆ ಬದ್ಯಾರ್ ಇವರ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಮಹಿಳೆಯರ ಕ್ಯಾನ್ಸ‌ರ್ ತಪಾಸಣಾ ಶಿಬಿರ ಜೂ.15ರಂದು ಬೆಳಿಗ್ಗೆ 9ರಿಂದ 12.30ರವರೆಗೆ ಹೋಲಿ ರಿಡೀಮರ್ ಆಡಿಟೋರಿಯಂ ಬೆಳ್ತಂಗಡಿಯಲ್ಲಿ ನಡೆಯಲಿದೆ.

ಲಭ್ಯವಿರುವ ವೈದ್ಯರ ಸೇವೆ: ಮೆಡಿಸಿನ್ ವಿಭಾಗ, ಮೂಳೆ ಚಿಕಿತ್ಸಾ ವಿಭಾಗ, ಪ್ರಸೂತಿ ಚಿಕಿತ್ಸಾ ವಿಭಾಗ, ಶಸ್ತ್ರ ಚಿಕಿತ್ಸಾ ಹಾಗೂ ಕ್ಯಾನ್ಸರ್ ಚಿಕಿತ್ಸಾ ವಿಭಾಗ, ಕಿವಿ, ಮೂಗು, ಗಂಟಲು ಚಿಕಿತ್ಸಾ ವಿಭಾಗ, ಮಕ್ಕಳ ಚಿಕಿತ್ಸಾ ವಿಭಾಗ, ಕಣ್ಣಿನ ಚಿಕಿತ್ಸಾ ವಿಭಾಗ, ಚರ್ಮರೋಗ ಚಿಕಿತ್ಸಾ ವಿಭಾಗ, ಮನೋರೋಗ ಚಿಕಿತ್ಸಾ ವಿಭಾಗ.

ಲಭ್ಯವಿರುವ ಸೇವೆಗಳು: ಉಚಿತ ವೈದ್ಯರ ಸೇವೆ, ಉಚಿತ ಫಾ ಎಲ್.ಎಮ್ ಪಿಂಟೊ ಹೆಲ್ತ್ ಕಾರ್ಡ್, ಉಚಿತ ಮಧುಮೇಹ ತಪಾಸಣೆ, 50% ಹಿಮೋಗ್ಲೋಬಿನ್ ಪರೀಕ್ಷೆ, ಸ್ತನ ಪರೀಕ್ಷೆ, ಉಚಿತ ಇಸಿಜಿ (ಅಗತ್ಯವಿರುವವರಿಗೆ ಮಾತ್ರ), ಉಚಿತ ಔಷಧಿ 50% ಹಾರ್ಮೊನ್ ರಕ್ತ ಪರೀಕ್ಷೆ, 50% 66 ‘2’ 2, ಬಿ 12 PAP SMEAR TEST ಕ್ಯಾನ್ಸರ್ ತಪಾಸಣಾ ಪರೀಕ್ಷೆ ನಡೆಯಲಿದೆ.ಉಚಿತ ಕಣ್ಣು ತಪಾಸಣ ಶಿಬಿರವು ನಡೆಯಲಿದೆ.

ಶಿಬಿರ ಪ್ರಯುಕ್ತ ರೂ. 1500/- ಬೆಲೆಯ ಕನ್ನಡಕಗಳನ್ನು 50% ರಿಯಾಯಿತಿ ದರದಲ್ಲಿ ರೂ. 750/-ಗೆ ವಿತರಿಸಲಾಗುವುದು. ಶಿಬಿರಾರ್ಥಿಗಳು ಇದರ ಪ್ರಯೋಜನ ಪಡೆಯುವುದು. ಕನ್ನಡಕದ ಶುಲ್ಕವನ್ನು ಮುಂಚಿತವಾಗಿ ಪಾವತಿಸತಕ್ಕದ್ದು. ಕನ್ನಡಕಗಳನ್ನು 20-06-2025, ಶುಕ್ರವಾರ (ಐದು ದಿನಗಳಲ್ಲಿ) ವಿತರಿಸಲಾಗುವುದು.

LEAVE A REPLY

Please enter your comment!
Please enter your name here