ಆರಂಬೋಡಿ: ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ 2025-26ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಮತ್ತು ವಿವಿಧ ಕೊಡುಗೆ ನೀಡಿದ ಗಣ್ಯರಿಗೆ ಅಭಿನಂದನೆ ಸಭೆ ಆರಂಬೋಡಿ ಶಾಲಾ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಶಾಲಾ ಎಸ್. ಡಿ. ಎಂ. ಸಿ ಅಧ್ಯಕ್ಷ ಇಲ್ಯಾಸ್ ಅಬ್ದುಲ್ ಹಕೀಂ ಸ್ವಾಗತಿಸಿದರು.

ಮನೋಜ್ ಶೆಟ್ಟಿ ಐತೇರಿ, ರಮೇಶ್ ಅಬುರ, ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ ಮಾಡಿದರು. ರೋಟರಿ ಕ್ಲಬ್ ಲೋರೆಟ್ಟೋ ಹಿಲ್ಸ್ ಅಧ್ಯಕ್ಷ ವಕೀಲ ಸುರೇಶ್ ಶೆಟ್ಟಿ ಶಾಲೆಗೆ ಸೌಂಡ್ಸ್ ಸಿಸ್ಟಮ್ ಕೊಡುಗೆಯಾಗಿ ನೀಡಿದರು. ರಾಘವೇಂದ್ರ ಭಟ್ ಶಾಲಾ ಮಕ್ಕಳಿಗೆ ಛತ್ರಿ ವಿತರಣೆ ಮಾಡಿದರು. ಮಂಜುಶ್ರೀ ಎಲೆಕ್ಟ್ರಾನಿಕ್ಸ್ ಮಾಲೀಕ ಗಣೇಶ್ ಪೂಜಾರಿ ಶಾಲಾ ನಲಿ ಕಲಿ ಮಕ್ಕಳಿಗೆ ಟೇಬಲ್ ಮತ್ತು ಚಯಾರ್ ನೀಡಿದರು. ಉದ್ಯಮಿ ಕೃಷಿಕರು ಕಿರಣ್ ಕುಮಾರ್ ಮಂಜಿಲ ಶಾಲಾ ಮಕ್ಕಳಿಗೆ ಸ್ಕ್ವೇಡ್ ಡ್ರೆಸ್ ನೀಡಿದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ವಕೀಲರು ಸುರೇಶ್ ಶೆಟ್ಟಿ, ರಾಘವೇಂದ್ರ ಭಟ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಸುಶೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಸಂಜೀವ ಶೆಟ್ಟಿ, ಅಬುರ ಮನೋಜ್ ಶೆಟ್ಟಿ, ಐತೇರಿ ರಮೇಶ್ ಅಬುರ, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರಹಾಸ ಪೂಜಾರಿ ಎಸ್. ಡಿ. ಎಂ. ಸಿ ಉಪಾಧ್ಯಕ್ಷ ಗಣೇಶ್ ಶೆಟ್ಟಿಗಾರ್, ಪ್ರಭಾಕರ್ ಮೈರಬೆಟ್ಟು, ಸೋಮನಾಥ ಪೂಜಾರಿ ಉಪಸ್ಥರಿದ್ದರು. ಶಾಲಾ ಶಿಕ್ಷಕಿ ವಿಜಯಲಕ್ಷ್ಮಿ ವಂದಿಸಿದರು.