ಸುಲ್ಕೇರಿ: ಜೂ.5ರಂದು ವೇಣೂರು ವಲಯದ ಅಳದಂಗಡಿ ಶಾಖೆಯ ವ್ಯಾಪ್ತಿಯ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ/ಶ್ರೀ ರಾಮ ಪ್ರೌಢ ಶಾಲೆ ಸುಲ್ಕೆರಿ ಇದರ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಗಿಡ ನೆಡುವ ಕಾರ್ಯಕ್ರಮ ನಡೆಯಿತು.


ಈ ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಜು ಪೂಜಾರಿ, ನಾವರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶುಭಕರ ಪೂಜಾರಿ, ಮುಖ್ಯಪಾಧ್ಯಾಯ ಪ್ರಮೋದ್ ಪೂಜಾರಿ, ಶಿಕ್ಷಕ ವರ್ಗದವರು ಹಾಗೂ ಅಳದಂಗಡಿ ಶಾಖೆ ಹಾಗೂ ಅಳದಂಗಡಿ ವನ್ಯ ಜೀವಿ ಶಾಖೆಯ ಉಪವಲಯ ಅರಣ್ಯ ಅಧಿಕಾರಿಗಳಾದ ಹರಿಪ್ರಸಾದ್, ಭರತ್ ಪೂಜಾರಿ, ಗಸ್ತು ಅರಣ್ಯ ಪಾಲಕರಾದ ಮಂಜುನಾಥ್, ಹೇಮಂತ್ ಕುಮಾರ್, ಸಂತೋಷ್ ಅರಣ್ಯ ವೀಕ್ಷಕರಾದ ಬಸವರಾಜ್, ಸಂದೇಶ್, ಸಜಿತ್ ಭಾಗವಹಿಸಿದರು.