ಗುರುವಾಯನಕೆರೆ: ಜಗತ್ತಿನ ಶ್ರೇಷ್ಠ ತಾಂತ್ರಿಕ ಶಿಕ್ಷಣ ಸಂಸ್ಥೆಗಳಾದ ಐ.ಐ.ಟಿ, ಐ.ಐ.ಐ.ಟಿ ಹಾಗೂ ಎನ್.ಐ.ಐ.ಟಿ ಗಳಿಗೆ ಪ್ರವೇಶ ಕಲ್ಪಿಸುವ ಜೆ. ಇ. ಇ ಅಡ್ವಾನ್ಸ್ ಎಕ್ಸಾಂನಲ್ಲಿ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಪೂರ್ವ ಸಾಧನೆ ಮಾಡಿದ್ದಾರೆ.
ಈ ಹಿಂದೆ ನಡೆದ ಜೆ. ಇ. ಇ ಮೈನ್ಸ್ ಶಿಫ್ಟ್ 1 ಮತ್ತು ಜೆ. ಇ. ಇ ಮೈನ್ ಶಿಫ್ಟ್ 2 ರಲ್ಲಿ ಅತ್ಯುತ್ತಮ ಫಲಿತಾಂಶ ಪಡೆದುಕೊಂಡು ಎಕ್ಸೆಲ್ ನ ಹಲವು ವಿದ್ಯಾರ್ಥಿಗಳು ಅಡ್ವಾನ್ಸ್ ಪರೀಕ್ಷೆ ಬರೆಯಲು ಆಯ್ಕೆಯಾಗಿದ್ದರು.
ಜೆ.ಇ.ಇ ಅಡ್ವಾನ್ಸ್ ಪರೀಕ್ಷೆ ಅತ್ಯಂತ ಪ್ರತಿಭಾವಂತರಿಗೆ ಕೂಡಾ ಗಗನ ಕುಸುಮವಾಗಿರುವ ಸಂದರ್ಭದಲ್ಲಿ ಎಕ್ಸೆಲ್ ನ ವಿದ್ಯಾರ್ಥಿಗಳು ರಾಷ್ಟ್ರದ ಬಹಳ ಕಠಿಣ ಪರೀಕ್ಷೆಯೆನಿಸಿಕೊಂಡ ಜೆ.ಇ.ಇ ಅಡ್ವಾನ್ಸ್ ನಲ್ಲಿ ಅತ್ಯುತ್ತಮ ರ್ಯಾಂಕ್ ಗಳಿಸಿ ಕೊಳ್ಳಲು ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಅತ್ಯಂತ ಗುಣಮಟ್ಟದ ಕೋಚಿಂಗ್ ಕಾರಣವಾಗಿದೆ.
ವೀರಭದ್ರೇಶ್ ಕಟಗೇರಿ ರಾಷ್ಟ್ರ ಮಟ್ಟದಲ್ಲಿ- 45ನೇ ರ್ಯಾಂಕ್ ,
ಪ್ರಥಮ್ ಎಸ್- 247 ನೇ ರ್ಯಾಂಕ್,
ರೋಹಿತ್ ಮಂಜ- 1125, ಅನುಜ್ ಕೆ.ಎಸ್.- 3421
ಮೊಹಮ್ಮದ್ ರುವೈದ್ ರುಕ್ಸಾರ್ – 12308 ರ್ಯಾಂಕ್ ಗಳಿಸಿಕೊಂಡಿದ್ದಾರೆ.
ರಾಷ್ಟ್ರ ಮಟ್ಟದಲ್ಲಿ ಸೀಮಿತ ಸೀಟ್ ಗಳಿರುವ ಐ. ಐ .ಟಿ ಗಳಿಗೆ ತಮ್ಮ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿರುವುದಕ್ಕೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಪ್ರಾಂಶುಪಾಲರು, ಪ್ರಾಧ್ಯಾಪಕರು ಹರ್ಷ ವ್ಯಕ್ತ ಪಡಿಸಿದ್ದಾರೆ.