ಉಜಿರೆ: ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಉಜಿರೆ, ರೋಟರಿ ಕ್ಲಬ್ ಬೆಳ್ತಂಗಡಿ, ಎಸ್. ಡಿ. ಎಂ ಎನ್. ಎಸ್. ಎಸ್ ಘಟಕಗಳು ಉಜಿರೆ, ಎಸ್. ಡಿ. ಎಂ ಸ್ಪೋರ್ಟ್ಸ್ ಕ್ಲಬ್ ಉಜಿರೆ, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘ ಬೆಳ್ತಂಗಡಿ, ಗ್ಯಾರೇಜ್ ಮಾಲಕರ ಸಂಘ ಬೆಳ್ತಂಗಡಿ ವಲಯ, ಶ್ರೀ ಜನಾರ್ದನ ಸ್ವಾಮಿ ಸೇವಾ ಟ್ರಸ್ಟ್ ಉಜಿರೆ ಇದರ ನೇತೃತ್ವದಲ್ಲಿ ಯಶೋ ವಿಜಯ ಕಾರ್ಯಕ್ರಮ ಉಜಿರೆ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆಯಿತು.
ಬೆಳ್ತಂಗಡಿಯ ಮೇರು ವ್ಯಕ್ತಿತ್ವಗಳಾದ ದಿ.ವಿಜಯರಾಘವ ಪಡ್ವೆಟ್ನಾಯ ಹಾಗೂ ದಿ. ಡಾ.ಬಿ.ಯಶೋವರ್ಮರ ನೆನಪಿನಲ್ಲಿ ಬದುಕು ನೆನಪು ಸ್ಮರಣೆ ಕಾರ್ಯಕ್ರಮ ವಿಭಿನ್ನವಾಗಿ ನಡೆಯಿತು.

ಕಾರ್ಯಕ್ರಮವನ್ನು ಸೋನಿಯಾ ಯಶೋವರ್ಮ ಉದ್ಘಾಟಿಸಿ ಮಾತನಾಡಿ, ಬದುಕು ಕಟ್ಟೋಣ ಮತ್ತು ಇತರ ಸಂಸ್ಥೆಗಳ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು.
ಮುಖ್ಯ ಅತಿಥಿ ಡಾ. ಪ್ರದೀಪ್ ಮಾತನಾಡಿ” ಬೆಳ್ತಂಗಡಿಯಲ್ಲಿ ಬದುಕು ಕಟ್ಟೋಣ ತಂಡ ಆಸರೆಯಾಗಿದೆ. ಕಷ್ಟಗಳು ಬಂದಾಗ ಮೊದಲು ನೆನಪಾಗುವ ತಂಡ ಬದುಕು ಕಟ್ಟೋಣ ಬನ್ನಿ. ವಿಜಯರಾಘವ ಪಡ್ವೆಟ್ನಾಯರು ಹಾಗೂ ಯಶೋವರ್ಮರವರು ಸಮಾಜಕ್ಕೆ ಬೆಳಕು ನೀಡಿರುವ ಮಹಾನ್ ವ್ಯಕ್ತಿತ್ವ ಬೆಳ್ತಂಗಡಿಯ ಎರಡು ಕಣ್ಣುಗಳಿದ್ದಂತೆ, ಅವರಿಬ್ಬರ ವ್ಯಕ್ತಿತ್ವ ಅನುಕರಣೀಯ” ಎಂದರು.
ಇದೇ ವೇಳೆ ಮಾತನಾಡಿದ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮ ಮಾತನಾಡಿ “ಅದೆಷ್ಟೋ ನೊಂದ ವಿದ್ಯಾರ್ಥಿಗಳ ಕಣ್ಣೀರು ಒರೆಸುವ ಕೆಲಸವನ್ನು ಬದುಕು ಕಟ್ಟೋಣ ತಂಡ ಮಾಡಿದೆ.
ಬ್ಯಾಗ್, ಕೊಡೆ ವಿತರಣೆ, ಸಾಧಕ ವಿದ್ಯಾರ್ಥಿಗಳಿಗೆ ಗೌರವ, ವಿಜಯ ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ 1ರಿಂದ ಏಳನೇ ತರಗತಿಯವರೆಗಿನ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಬ್ಯಾಗ್ ಹಾಗೂ ಕೊಡೆ ವಿತರಿಸಲಾಯಿತು.
2024-25ನೇ ಸಾಲಿನ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ 600ಕ್ಕೂ ಅಧಿಕ ಅಂಕಗಳಿಸಿದ ಬೆಳ್ತಂಗಡಿ ತಾಲೂಕಿನ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.
ವಿಜಯರಾಘವ ಪಡ್ವೆಟ್ನಾಯರ ಸ್ಮರಣಾರ್ಥ ಬದುಕು ಕಟ್ಟೋಣ ಬನ್ನಿ ತಂಡದಿಂದ ಕಲ್ಮಂಜ ಗ್ರಾಮದ ಬಿರ್ಮೆರಪಲ್ಕೆ ಎಂಬಲ್ಲಿ ನಿರ್ಮಿಸಿದ ಮನೆ ವಿಜಯ ಇದರ ಕೀ ಹಸ್ತಾಂತರಿಸಲಾಯಿತು. From Principals DESK of Dr.B.Yashovarma ಪುಸ್ತಕವನ್ನು ಲೋಕಾರ್ಪಣೆಗೊಳಿಸಲಾಯಿತು. ಧರ್ಮಸ್ಥಳದ ಹೇಮಾವತಿ ವಿ ಹೆಗ್ಗಡೆಯವರ ಕೊಡುಗೆ ಶ್ರದ್ಧಾ ಅಮಿತ್ ರವರ ಸಂಗ್ರಹದ ಮುನ್ನೂರಕ್ಕೂ ಅಧಿಕ ಪುಸ್ತಕಗಳನ್ನು ಸರ್ಕಾರಿ ಶಾಲೆ ಕರ್ನೋಡಿ ಇಲ್ಲಿನ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.