ಮಚ್ಚಿನ: ಬೆಳ್ತಂಗಡಿ ತಾಲೂಕು ಬಳ್ಳಮಂಜ ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಜಿರ್ಣೋದ್ಧಾರದ ಕೆಲಸವು ನಡೆಯುತ್ತಿದ್ದು ಇದರ ಧ್ವಜಸ್ತಂಭದ ವೃಕ್ಷ ಮುಹೂರ್ತವು ಇತ್ತೀಚೆಗೆ ನಡೆದಿದ್ದು, ತಣ್ಣೀರುಪಂತ ಗ್ರಾಮದ ಅಲಕ್ಕೆ ಬೈಲಿನ ಕುಟುಂಬಸ್ಥರು ದಾನವಾಗಿ ನೀಡಿದ ಕೊಡಿ ಮರ ಬ್ರಹ್ಮಶ್ರೀ ಡಾ. ದೇರೆಬೈಲ್ ಶಿವಪ್ರಸಾದ್ ತಂತ್ರಿಗಳ ಮಾರ್ಗದರ್ಶನದಂತೆ ಕೊಡಿ ಮರದ ಭವ್ಯ ಮೆರವಣಿಗೆ
ಅಲಕ್ಕೆ ಬಳ್ಳಮಂಜ ಮಾರ್ಗವಾಗಿ ಮೇ.30ರಂದು ಸಾಯಂಕಾಲ ಗಂಟೆಗೆ 5-30ಕ್ಕೆ ಶ್ರೀ ಕ್ಷೇತ್ರಕ್ಕೆ ಆಗಮಿಸಲಿದೆ.
ಕಾರ್ಯಕ್ರಮದಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಶಾಸಕ ಹರೀಶ್ ಪೂಂಜಾ, ಶ್ರೀ ರುದ್ರಗಿರಿ ದೇವಸ್ಥಾನ ತಣ್ಣೀರುಪಂಥ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೈ. ಭರತ್ ಶೆಟ್ಟಿ ಕೇರಿ, ಮಾಲಾಡಿ ಜೈ ಮಾತಾ ಲ್ಯಾಮಿನೇಟರ್ಸ್ ವಿಜಯಚಂದ್ರ ಭಾಗವಹಿಸುವರು.
ಕಾರ್ಯಕ್ರಮದ ಬಳಿಕ ಸುಂದರಿ ಹಾಗು ವಿಠಲ ಶೆಟ್ಟಿ ಮತ್ತು ಮಕ್ಕಳು ತಾರೆಮಾರು ಇವರ ವತಿಯಿಂದ ರಂಗಪೂಜೆ ಹಾಗು ಅನ್ನದಾನ ನಡೆಯಲಿದೆ. ತಾವೆಲ್ಲರೂ ಈ ಪುಣ್ಯ ಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಬೇಕಾಗಿ ತಾವೆಲ್ಲರೂ ಆಗಮಿಸಿ ಈ ಪುಣ್ಯ ಕಾರ್ಯದಲ್ಲಿ ಭಾಗಿಳಾಗಬೇಕಾಗಿ ಅಪೇಕ್ಷಿಸುವ ಶ್ರೀ ಕ್ಷೇತ್ರ ಬಳ್ಳಮಂಜ ದೇವಸ್ಥಾನದ ಆನುವಂಶೀಯ ಆಡಳಿತ ಮೊಕ್ತೇಸರ ಡಾ. ಎಂ ಹರ್ಷ ಸಂಪಿಗೆತ್ತಾಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.