ಬೆಳ್ತಂಗಡಿ: ಕರ್ನಾಟಕ ಮುಸ್ಲಿಮ್ ಜಮಾಆತ್ ನ ಗುರುವಾಯನಕೆರೆ ಸರ್ಕಲ್ ವ್ಯಾಪ್ತಿಯ ಯೂನಿಟ್ ಗಳ ಮಾಸಿಕ ಪ್ರಥಮ ಸಭೆಯು ಮದ್ದಡ್ಕ ನೂರುಲ್ ಹುದಾ ಜುಮ್ಮಾ ಮಸೀದಿಯ ಸಭಾಭವನದಲ್ಲಿ ಜರಗಿತು.
ಅಧ್ಯಕ್ಷತೆಯನ್ನು ಅಬ್ದುಲ್ ಹಮೀದ್ ಅಲ್ ಫುರ್ಖಾನಿ ವಹಿಸಿದ್ದರು. ಉಸ್ಮಾನ್ ಸಖಾಫಿ ದುವಾ ನೆರವೇರಿಸಿದರು. ಎನ್.ಎಸ್.ಉಮ್ಮರ್ ಮಾಸ್ಟರ್ ಪ್ರಸ್ತಾವನೆಗೈದರು.
ಗುರುವಾಯನಕೆರೆ ಸರ್ಕಲ್ ನಿಂದ ರಾಜ್ಯ ಸಮಿತಿಗೆ ಕೌನ್ಸಿಲರ್ ಆಗಿ ನೇಮಕಗೊಂಡ ಹಿರಿಯ ಮುಖಂಡರಾದ ಅಬ್ಬೋನು ಮದ್ದಡ್ಕ ಹಾಗೂ ಎನ್.ಎಸ್.ಉಮ್ಮರ್ ಮಾಸ್ಟರ್ ರವರನ್ನು ಗೌರವಿಸಲಾಯಿತು. ಸಭೆಯಲ್ಲಿ ಸರ್ಕಲ್ ಉಪಾಧ್ಯಕ್ಷರಾದ ಉಸ್ಮಾನ್ ಹಾಜಿ ಆಲಂದಿಲ, ಅಬೂಬಕ್ಕರ್ ಹಾಜಿ ಪರಪ್ಪು, ಅಬ್ದುಲ್ ಕರೀಮ್ ಗೇರುಕಟ್ಟೆ, ಮಹಮ್ಮದ್ ರಫೀಕ್ ಮುಸ್ಲಿಯಾರ್ ಜಾರಿಗೆಬೈಲು, ಎಮ್.ಹೆಚ್. ಅಬೂಬಕ್ಕರ್, ಅಬ್ದುಲ್ ರಹಿಮಾನ್ ಲಾಡಿ, ಅಬ್ದುಲ್ ಖಾದರ್ ಹಾಜಿ ಪರಪ್ಪು, ಇಸ್ಮಾಯಿಲ್ ಹಾಜಿ ಜಾರಿಗೆಬೈಲು, ವಿವಿಧ ಯೂನಿಟ್ ಗಳ ಉಸ್ಮಾನ್ ಹಾಜಿ ಪರಪ್ಪು, ಎಸ್.ಸುಲೈಮಾನ್ ಜಾರಿಗೆಬೈಲು, ಮಹಮ್ಮದ್ ಆಲಂದಿಲ, ಮೂಸ ಕೆಲ್ಲಾರು ಹಾಜರಿದ್ದರು.
ವಿವಿಧ ಯೂನಿಟ್ ಗೆ ಉಸ್ತುವಾರಿಗಳನ್ನು ನೇಮಕ ಮಾಡಲಾಯಿತು. ಕಾಂತಿಜಾಲು – ಅಬ್ಬೋನು ಮದ್ದಡ್ಕ ಹಾಗೂ ಅಬ್ದುಲ್ ಕರೀಮ್, ಮದ್ದಡ್ಕ – ಮಹಮ್ಮದ್ ರಫೀಕ್ ಮುಸ್ಲಿಯಾರ್, ಲಾಡಿ – ಉಸ್ಮಾನ್ ಹಾಜಿ ಆಲಂದಿಲ, ಅಳದಂಗಡಿ – ಮಹಮ್ಮದ್ ಆಲಂದಿಲ, ಪರಪ್ಪು – ಎನ್.ಎಸ್ ಉಸ್ಮಾನ್ ಸಖಾಫಿ, ಜಾರಿಗೆ ಬೈಲು – ಅಬೂಬಕರ್ ಹಾಜಿ ಪರಪ್ಪು, ಆಲಂದಿಲ – ಎಮ್.ಹೆಚ್. ಅಬೂಬಕ್ಕರ್, ಬದ್ಯಾರ್ – ಇಸ್ಮಾಯಿಲ್ ಹಾಜಿ ಜಾರಿಗೆಬೈಲು, ಗುರುವಾಯನಕೆರೆ – ಅಬ್ದುಲ್ ರಹಿಮಾನ್ ಲಾಡಿ ಆಯ್ಕೆ ಮಾಡಲಾಯಿತು.