ನಾರಾವಿ: ಉಮಾಮಹೇಶ್ವರ ಪೆಟ್ರೋಲ್ ಪಂಪ್ ಉದ್ಘಾಟನೆ

0

ಬೆಳ್ತಂಗಡಿ: ಗುರುವಾಯನಕೆರೆ ರಾಜ್ಯ ರಸ್ತೆ ಸಮೀಪ ನಾರಾವಿಯಲ್ಲಿ ನೂತನವಾಗಿ ನಿರ್ಮಿಸಿರುವ ಉಮಾಮಹೇಶ್ವರ ಪೆಟ್ರೋಲ್ ಪಂಪ್ ಇದರ ಉದ್ಘಾಟನೆಯನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ್ ಅಜಿಲರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಉಧ್ಯಮದಲ್ಲಿ ಗುಣಮಟ್ಟ ಹಾಗೂ ಸೇವೆ ಮುಖ್ಯ ಎಂದು ಶುಭ ಕೋರಿದರು.

ಉಮಾಮಹೇಶ್ವರ ಪೆಟ್ರೋಲ್ ಪಂಪ್ ಇದರ ಮಾಲಕ, ಕೈಗಾರಿಕೋದ್ಯಮಿ ದೇವೇಂದ್ರ ಹೆಗ್ಡೆ ಕೊಡಂಗೆಗುತ್ತು ಕೊಕ್ರಾಡಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಅರ್ಪಿಸಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್, ಮೂಲ್ಕಿ, ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್, ಎಮ್.ಆರ್ ಪಿ.ಎಲ್ ಚೀಫ್ ರಿಜಿನಲ್ ಮ್ಯಾನೇಜರ್ ಸ್ವಾಮಿ ಪ್ರಸಾದ್, ಅಳದಂಗಡಿ ಸತ್ಯದೇವತಾ ದೇವಸ್ಥಾನದ ಆಡಳಿತ ಮೊಕ್ತಸರ ಶಿವಪ್ರಸಾದ್ ಅಜಿಲ, ನಾರಾವಿ ಗ್ರಾ.ಪಂ. ಅಧ್ಯಕ್ಷ ರಾಜವರ್ಮ ಜೈನ್, ನಾರಾವಿ ಸೂರ್ಯನಾರಾಯಣ ದೇವಸ್ಥಾನ ಆಡಳಿತ ಮೊಕ್ತಸರ ರವೀಂದ್ರ ಪೂಜಾರಿ ಬಾಂದೊಟ್ಟು, ಕೋಟೆಬಾಗಿಲು ವೀರಮಾರುತಿ ದೇವಸ್ಥಾನ ಆಡಳಿತ ಮೊಕೇಸರ ಉದಯ್ ಕುಮಾರ್ ಹೆಗ್ಡೆ, ನಾರಾವಿ ಸಿಎ ಬ್ಯಾಂಕ್‌ ಅಧ್ಯಕ್ಷ ಸುಧಾಕರ್ ಭಂಡಾರಿ, ಉದ್ಯಮಿ ಶ್ರೀನಿವಾಸ್‌ ಕಿಣಿ ನಾರಾವಿ, ಮರೋಡಿ ಉಮಾಮಹೇಶ್ವರ ದೇವಸ್ಥಾನದ ಕಾರ್ಯದರ್ಶಿ ಜಯಂತ್ ಕೋಟ್ಯಾನ್, ಕೊಕ್ರಾಡಿ ಕ್ಷೇಮ ಕ್ಲಿನಿಕ್ ಡಾ.ವಿಷ್ಣು ಕುಮಾರ್, ನಾರಾವಿ ಜಿನ ಚೈತ್ತಾಲಯ ಆಡಳಿತ ಮೊಕ್ತಸರಾದ ನಿರಂಜನ ಅಜಿ ರಾಮೇರಗುತ್ತು ಹಾಗೂ ಉದ್ಯಮಿ ವಸಂತ್ ಭಟ್ ನಾರಾವಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಅಳದಂಗಡಿ ಸಿಎ ಬ್ಯಾಂಕ್ ಅಧ್ಯಕ್ಷ ರಾಕೇಶ್ ಹೆಗ್ಡೆ ಬಳಂಜ, ಮರೋಡಿ ಗ್ರಾ.ಪಂ. ಅಧ್ಯಕ್ಷ ರತ್ನಾಕರ ಬುಣ್ಣನ್, ಪ್ರಮುಖರಾದ ಜೀವಂಧರ್ ಜೈನ್, ದೈಹಿಕ ಶಿಕ್ಷಕ ಪ್ರಭಾಕರ್ ನಾರಾವಿ, ಉದ್ಯಮಿಗಳಾದ ಶ್ರೀನಿವಾಸ್‌ ಕಿಣಿ, ಸಂತೋಷ್ ಹೆಗ್ಡೆ ಮಾರುತಿ ನಿಲಯ, ನಾರಾವಿ ಸಿಎ ಬ್ಯಾಂಕ್ ಉಪಾಧ್ಯಕ್ಷ ಜಗದೀಶ್ ಹೆಗ್ಡೆ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಶಿಕಾಂತ್ ಜೈನ್, ನಿರೂಪಕ ವಿಜಯ್ ಕುಮಾ‌ರ್ ಜೈನ್, ಉದಯ ಹೆಗ್ಡೆ ನಾರಾವಿ, ಅಬಿಜಿತ್‌ ಜೈನ್ ನಾರಾವಿ, ಶ್ರೀರಂಗ ಮಯ್ಯ, ಮೋಹನ್ ಅಂಡಿಂಜೆ, ಗುರುಪ್ರಸಾದ್ ನಾರಾವಿ, ಗೀರೀಶ್ ಹೆಗ್ಡೆ, ಕೊಂಡಂಗೆಗುತ್ತು ಕುಟುಂಬ ಸದಸ್ಯರು ಮೊದಲಾದವರು ಉಪಸ್ಥಿತರಿದ್ದು ಶುಭ ಕೋರಿದರು. ನೇಹಾ ಹೆಗ್ಡೆ ಪ್ರಾರ್ಥನೆ ಹಾಡಿದರು. ಮಾಲಕ ದೇವೇಂದ್ರ ಹೆಗ್ಡೆ, ದೀಪಾ ಹೆಗ್ಡೆ ಕೊಕ್ರಾಡಿ ಸ್ವಾಗತಿಸಿದರು. ಶಿಕ್ಷಕ ಅಜಿತ್ ಕುಮಾ‌ರ್ ಕೊಕ್ರಾಡಿ ನಿರೂಪಿಸಿದರು. ಪಾಲುದಾರ ನವೀನ್ ಹೆಗ್ಡೆ ವಂದಿಸಿದರು.

LEAVE A REPLY

Please enter your comment!
Please enter your name here