ಬೆಳ್ತಂಗಡಿ : ದ ಕ ಗ್ಯಾರೇಜು ಮಾಲಕರ ಸಂಘ, ಗ್ಯಾರೇಜು ಮಾಲಕರ ಸ್ಪೋರ್ಟ್ಸ್ ಕ್ಲಬ್ ಮಂಗಳೂರು, ನೆಹರು ಯುವ ಕೇಂದ್ರ, ಮಂಗಳೂರು ಉಡುಪಿ ಜಿಲ್ಲೆಗಳ ಕ್ರೀಡೋತ್ಸವ ಮತ್ತು ಕುಟುಂಬ ಸಮ್ಮಿಲನ ಕಾರ್ಯ ಕ್ರಮ ಮಂಗಳಾ ಕ್ರೀಡಾಂಗಣ ಮಂಗಳೂರಿನಲ್ಲಿ ಮೇ. 11ರಂದು ನಡೆಯುವ ಬೆಳ್ತಂಗಡಿ ವಲಯದ ಕ್ರೀಡಾ ಸಮವಸ್ತ್ರದ (ಜೆರ್ಸಿ) ಬಿಡುಗಡೆ ಕಾರ್ಯಕ್ರಮವು ಮೇ. 10ರಂದು ನಡೆಯಿತು.

ವಲಯದ ಹಿತೈಷಿಗಳು, ಮಹಾ ಪೋಷಕರು, ಬೆಳ್ತಂಗಡಿ ವಲಯ ಪ್ರಾಯೋಜಕರಾಗಿರುವ ಶ್ರೀ ಲಕ್ಷ್ಮೀ ಗ್ರೂಪ್ ಕನಸಿನ ಮನೆ, ಬದುಕು ಕಟ್ಟೋಣ ಬನ್ನಿ ತಂಡದ ಮುಖ್ಯಸ್ಥರು ಮೋಹನ್ ಕುಮಾರ್ ಇವರು ಜೆರ್ಸಿ ಮಾತ್ರವಲ್ಲದೆ ಬೆಳ್ತಂಗಡಿ ವಲಯಕ್ಕೆ ಸಂಪೂರ್ಣ ಪ್ರಾಯೋಜಕತ್ವ ವಹಿಸಿ ಮಹಾ ಪೋಷಕರಾಗಿದ್ದಾರೆ.ಇವರಿಗೆ ದ. ಕ ಜಿಲ್ಲೆ ಹಾಗೂ ಬೆಳ್ತಂಗಡಿ ವಲಯ ಗ್ಯಾರೇಜ್ ಮಾಲಕರ ಸಂಘ ಸದಾ ಚಿರಋಣಿಯಾಗಿರುತ್ತದೆ.
ಬೆಳ್ತಂಗಡಿ ಉಜಿರೆ ಇವರು ಬಿಡುಗಡೆಗೊಳಿಸಿದರು. ವಲಯ ಅಧ್ಯಕ್ಷ ಬಾಬು ರಾಜ್ ವಿ. ವಿ., ಸಂಚಾಲಕ ಬಾಲಕೃಷ್ಣ ಶೆಟ್ಟಿ, ಕಾರ್ಯದರ್ಶಿ ಪುರಂದರ ಹೆಗ್ಡೆ, ಡಿ.ಕೆ.ಜಿ.ಎಂ.ಎಸ್. ಬ್ಯಾಂಕ್ ನಿರ್ದೇಶಕ ಆರ್ ಜೇ ಸೋನ್ಸ್, ಮಂಜು ಪಟ್ರಮೆ, ಪ್ರವೀಣ್ ಕುಮಾರ್ ಉಜಿರೆ, ಆನಂದ, ಕೇಶವ ಬೆಳ್ತಂಗಡಿ, ನಿಕಟ ಪೂರ್ವ ಅಧ್ಯಕ್ಷ ಪೂವಪ್ಪ ಗೌಡ ಉಜಿರೆ ಉಪಸ್ಥಿತರಿದ್ದರು.