ಬೆಳ್ತಂಗಡಿ: ಬಂಟರ ಯಾನೆ ನಾಡವರ ಸಂಘದ ಪದಾಧಿಕಾರಿಗಳು ಮೇ. 9 ರಂದು ದುಷ್ಕರ್ಮಿಗಳಿಂದ ಬಲಿಯಾದ ಹಿಂದೂ ಹೋರಾಟಗಾರ ಸುಹಾಸ್ ಶೆಟ್ಟಿಯವರ ಕಾರಿಂಜದಲ್ಲಿರುವ ಮನೆಗೆ ಹೋಗಿ ಪೋಷಕರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.
ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಬಿ.ಜಯಂತ್ ಶೆಟ್ಟಿ ಭಂಡಾರಿಗುಡ್ಡೆ, ಕಾರ್ಯದರ್ಶಿ ಸುರೇಶ್ ಲಾಯಿಲ, ಉಪಾಧ್ಯಕ್ಷರಾದ ನವೀನ್ ಸಾಮಾನಿ ಕರಂಬಾರುಬೀಡು, ಉಮೇಶ್ ಶೆಟ್ಟಿ ದುರ್ಗಾ, ಕೋಶಾಧಿಕಾರಿ ವಸಂತ್ ಶೆಟ್ಟಿ ಶ್ರದ್ಧಾ, ಜತೆ ಕಾರ್ಯದರ್ಶಿ ಕಿರಣ್ ಕುಮಾರ್ ಶೆಟ್ಟಿ, ಕ್ರೀಡಾ ಸಂಚಾಲಕ ವೆಂಕಟ್ರಮಣ ಶೆಟ್ಟಿ, ವಿಜಯ ಕೋ ಆಪರೇಟಿವ್ ಬ್ಯಾಂಕ್ ಸಿ ಇ ಒ ಸುಜಯ್ ಶೆಟ್ಟಿ, ಬಂಟರ ಮಾತೃ ಸಂಘ ಸಂಚಾಲಕ ಜಯರಾಮ್ ಭಂಡಾರಿ, ನಿರ್ದೇಶಕರಾದ ಪ್ರಶಾಂತ್ ಶೆಟ್ಟಿ ಮೂಡಾಯೂರು, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ, ಸುಹಾಸ್ ಶೆಟ್ಟಿ ಕುಟುಂಸ್ಥರು ಉಪಸ್ಥಿತರಿದ್ದರು.