ಪದ್ಮುಂಜ: ಸುದ್ದಿ ಪ್ರತಿನಿಧಿ ಕಾಸಿಂ ಪದ್ಮುಂಜರವರ ಪುತ್ರ ಸೈಫುದ್ದೀನ್ ಹಾಸಿಮಿಯವರ ವಿವಾಹವು ಬೆಳ್ತಂಗಡಿ ತಾಲೂಕು ಪನಕ್ಕಜೆ ಗ್ರಾಮದ ಪೊಮ್ಮಾಜೆ ದಿ. ಅಬ್ದುಲ್ ಖಾದರ್ ರವರ ಪುತ್ರಿ ಫಾತಿಮತ್ ಮುನವ್ವರರೊಂದಿಗೆ ಮೇ. 4ರಂದು ಪದ್ಮುಂಜದಲ್ಲಿ ನೆರವೇರಿತು.
ಉಳ್ಳಾಲ ಮುಕ್ಕಚ್ಚೇರಿ ಧರ್ಮ ಗುರು ಅಬ್ಬಾಸ್ ಮದನಿ ಉಸ್ತಾದ್ ನಿಖಾಹ್ ನೆರವೇರಿಸಿದರು. ಪದ್ಮುಂಜ ಖಲಂದರ್ ಷಾ ಜುಮ್ಮಾ ಮಸೀದಿಯ ಮುಖ್ಯ ಗುರು ಹುಸೈನ್ ಸುಲ್ತಾನಿ ಸಅದಿ ಉಸ್ತಾದ್, ಮಂಗಳೂರು ಅಝ್ ಹರಿಯಾ ಕಾಲೇಜಿನ ಪ್ರಾಂಶುಪಾಲ ಹೈದರ್ ಮದನಿ ಉಸ್ತಾದ್, ಜಂಇಯತುಲ್ ಉಲಮಾ ರಾಜ್ಯ ನಾಯಕ ಪಿ. ಕೆ. ಮುಹಮ್ಮದ್ ಮದನಿ ಉಸ್ತಾದ್, ಪೊಮ್ಮಾಜೆ ಮಸೀದಿಯ ಮುಖ್ಯ ಗುರು ಸೈಯದ್ ಬದ್ರುದ್ದೀನ್ ತಂಙಳ್ ಸೇರಿದಂತೆ ಹಲವಾರು ಧರ್ಮ ಗುರುಗಳು, ಕುಟುಂಬಸ್ಥರು, ಸ್ನೇಹಿತರು, ಸಂಘ ಕುಟುಂಬದ ನಾಯಕರು ಉಪಸ್ಥಿತರಿದ್ದರು.
ಮದುವೆಯ ಪ್ರಯುಕ್ತ ಅಪರೂಪದ ವಿಶೇಷ ಕಾರ್ಯಕ್ರಮ ರಕ್ತದಾನ ಶಿಬಿರ ಉರುವಾಲು ಸೆಕ್ಟರ್ ಸುನ್ನೀ ಸ್ಟೂಡೆಂಟ್ ಫೆಡರೇಷನ್ ವತಿಯಿಂದ ನಡೆಸಲಾಯಿತು. ಕೆ. ಎಸ್. ಹೆಗ್ಡೆ ಆಸ್ಪತ್ರೆಯ ಸಹಭಾಗಿತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ 52 ಮಂದಿ ರಕ್ತದಾನಿಗಳು ರಕ್ತದಾನ ಮಾಡಿದರು. ಅಬ್ದುರ್ರಾಶಿದ್ ಸಆದಿ ಪದ್ಮುಂಜ ರವರು ದುಆ (ಪ್ರಾರ್ಥನೆ) ಸಲ್ಲಿಸಿದರು. ಸೆಕ್ಟರ್ ನಾಯಕ ನಿಜಾಮುದ್ದೀನ್ ಪದ್ಮುಂಜ ಸ್ವಾಗತಿಸಿ. ಧನ್ಯವಾದ ಸಲ್ಲಿಸಿದರು.