ಧರ್ಮಸ್ಥಳಕ್ಕೆ ಬಂದಿದ್ದ ಮಹಿಳೆಯ ಬ್ಯಾಗಿನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

0

ಬೆಳ್ತಂಗಡಿ: ಧರ್ಮಸ್ಥಳಕ್ಕೆ ಬಂದಿದ್ದ ಮಹಿಳೆಯ ಬ್ಯಾಗಿನಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನವಾದ ಘಟನೆ ಮೇ. 3ರಂದು ನಡೆದಿದೆ. ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಲತಾ ಎಂಬ ಮಹಿಳೆ ಮೇ. 2ರಂದು ಆಂಧ್ರಪ್ರದೇಶದ ನೆಲ್ಲೂರುನಿಂದ ಹೊರಟು ಮೇ. 3ರಂದು ಸಂಜೆ 5ಘಂಟೆಗೆ ಧರ್ಮಸ್ಥಳಕ್ಕೆ ತಲುಪಿರುತ್ತಾರೆ.

ದೇವರ ದರ್ಶನಕ್ಕೆ ಹೋಗುವ ಮೊದಲು ಲತಾರವರು ಬ್ರಾಸ್ ಲೈಟ್, ಚಿನ್ನದ ಚೈನ್, ನೆಕ್ಸೆಸ್ ನ್ನು ವ್ಯಾನಿಟಿಕ್ ಬ್ಯಾಗ್ ನ ಒಳಗಡೆ ಪ್ಲಾಸ್ಟಿಕ್ ಡಬ್ಬದಲ್ಲಿ ಹಾಕಿ ಬ್ಯಾಗ್ ನಲ್ಲಿ ಇಟ್ಟುಕೊಂಡು ದೇವರ ದರ್ಶನವನ್ನು ಮುಗಿಸಿ ಹೊರಡುವ ಸಮಯದಲ್ಲಿ ಬ್ಯಾಗನ್ನು ನೋಡಿದಾಗ ವ್ಯಾನಿಟಿಕ್ ಬ್ಯಾಗಿನ ಜಿಪ್ಪು ತೆರೆದಿದ್ದು, 97 ಗ್ರಾಂ. ತೂಕದ ಚಿನ್ನಾಭರಣಗಳು ಕಳವಾಗಿದ್ದು, ಒಟ್ಟು ಮೌಲ್ಯ ರೂ 6,79,000/- ಆಗಿರುತ್ತದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆ ಅ ಕ್ರ 17/2025 ಕಲಂ: 303(2) ಬಿಎನ್ ಎಸ್ 2023ಯಂತೆ ಪ್ರಕರಣ ದಾಖಲಾಗಿರುತ್ತದೆ.

LEAVE A REPLY

Please enter your comment!
Please enter your name here