ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ಬೆಳ್ತಂಗಡಿ ವತಿಯಿಂದ ನೇತ್ರಾವತಿಯವರಿಗೆ ಸಹಾಯಧನ

0

ಬೆಳ್ತಂಗಡಿ: ನೇತ್ರಾವತಿ ಎಂಬುವರು ಮೇಲಂತಬೆಟ್ಟುವಿನ ಕಬ್ಬಿಣಹಿತ್ತಿಲು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. 4 ತಿಂಗಳ ಹಿಂದೆ ಬೆನ್ನಿಗೆ ಮರ ಬಿದ್ದ ಕಾರಣ ಗಂಭೀರವಾದ ಆರೋಗ್ಯ ಸಮಸ್ಯೆ ಉಂಟಾಯಿತು. ವೈದ್ಯಕೀಯ ತಪಾಸಣೆಗಳು ಮತ್ತು ಚಿಕಿತ್ಸೆಗಾಗಿ ಹೆಚ್ಚಿನ ವೆಚ್ಚವಾಗುತ್ತಿರುವ ಹಿನ್ನೆಲೆಯಲ್ಲಿ, ತುಂಬಾ ಆರ್ಥಿಕ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ.

ಮೂಲತಃ ಅಂಗನವಾಡಿ ಟೀಚರ್ ಆಗಿ ಸದ್ಯ ಕೆಲಸವನ್ನು ಕೂಡ ಕಳೆದುಕೊಂಡಿದ್ದಾರೆ. ಇವರಿಗೆ 25 ಕೆ.ಜಿ ಅಕ್ಕಿ ಮತ್ತು ದಿನ ಸಾಮಗ್ರಿಗಳೊಂದಿಗೆ ಮತ್ತು ವೈದ್ಯಕೀಯ ತಪಾಸಣೆಗಾಗಿ 4000 ಕಿರು ಸಹಾಯದೊಂದಿಗೆ ಆಧಾರವಾದ ರಾಜ ಕೇಸರಿ ಸೇವಾ ಸಂಘಟನೆ. ರಾಜ ಕೇಸರಿ ಸಂಘಟನೆಯ ಸಂಸ್ಥಾಪಕ ದೀಪಕ್ ಜಿ ಬೆಳ್ತಂಗಡಿ, ತಾಲೂಕು ಅಧ್ಯಕ್ಷ ವಿನೋದ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಗುರುವಾಯನಕೆರೆ, ಸಂಘಟನಾ ಪ್ರಮುಖ ಸತೀಶ್ ಗೌಡ ಕಂಗಿತ್ತಿಲ್ಲ, ಸಹ ಸಂಚಾಲಕ ಶರತ್ ಕರಾಯ, ನಿಕಟ ಪೂರ್ವ ಅಧ್ಯಕ್ಷ ಸಂದೀಪ್ ಬೆಳ್ತಂಗಡಿ, ವಾಣಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಮತ್ತು ಜೆ ಸಿ ಐ ಭಾರತದ ವಲಯ ತರಬೇತುದಾರ ಶಂಕರ್ ರಾವ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here