
ಉಜಿರೆ: ಎರ್ನೋಡಿ ಶ್ರೀ ಆದಿ ನಾಗಬ್ರಹ್ಮ ಮೊಗರ್ಕಳ ದೈವಸ್ಥಾನ, ಸ್ವಾಮಿ ಕೊರಗಜ್ಜ ಸನ್ನಿಧಿಯಲ್ಲಿ 21ನೇ ವರ್ಷದ ಎರ್ನೋಡಿ ಜಾತ್ರೆ, ನೇಮೋತ್ಸವ ಎ. 13ರಿಂದ ಎ. 19ರವರೆಗೆ ಶರತ್ ಕೃಷ್ಣ
ಪಡುವೆಟನ್ನಾಯರ ಮಾರ್ಗದರ್ಶನದಲ್ಲಿ ಕೊರಗಪ್ಪ ಪಂಡಿತ್ ಶಂಭೂರು ಇವರ ಪೌರೋಹಿತ್ಯದಲ್ಲಿ ನಡೆಯಿತು. ಪ್ರತಿದಿನ ವೈದಿಕ ಕಾರ್ಯಕ್ರಮ ಗಳು, ವಿವಿಧ ಭಜನಾ ಮಂಡಳಿ ಗಳಿಂದ ಭಜನಾ ಕಾರ್ಯಕ್ರಮಗಳು ಜರಗಿತು.

ಎ. 19ರಂದು ಬೆಳಿಗ್ಗೆ ಗಣಹೋಮ, ನಾಗ ದೇವರ ಪೂಜೆ, ಸಾರ್ವಜನಿಕ ತಂಬಿಲ ಸೇವೆ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮದ್ಯಾಹ್ನ ಮಹಾ ಪೂಜೆ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆದು ಸಂಜೆ ಶ್ರೀ ಧರ್ಮ ದೈವ ಅಣ್ಣಪ್ಪ ಸ್ವಾಮಿ ನೇಮೋತ್ಸವ, ರಾತ್ರಿ ದೈವಗಳ ಭಂಡಾರ ತೆಗೆದು, ಗಡಿ ಮೊಗೇರ ದೈವ ಗಳಾದ ಶ್ರೀ ಮುದ್ದಕಳಲ ನೇಮೋ ತ್ಸವ, ದೇವಿ ಸ್ವರೂಪಿಣಿ ಶ್ರೀ ತನ್ನಿ ಮಾನಿಗ ನೇಮೋತ್ಸವ, ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ, ಎರ್ನೋಡಿ ಗುಳಿಗ ದೈವದ ನೇಮೋತ್ಸವ ನಡೆಯಿತು.

ಎ. 20ರಂದು ಕ್ಷೇತ್ರ ಶುದ್ಧಿಕರಣ, ಸಾರ್ವಜನಿಕ ಪ್ರಾರ್ಥನೆ, ಮಹಾಪೂಜೆ, ಎ. 21ರಂದು ಬೆಳಿಗ್ಗೆ ಪೂಜೆ, ಮಧ್ಯಾಹ್ನ ಕುರಿ ತಂಬಿಲ ಸೇವೆ ಮತ್ತು ಮಂಜದ ಪೂಜೆ ಹಾಗೂ ಸಾರ್ವಜನಿಕ ಕೊರಗಜ್ಜ ಆಗೇಲು ಸೇವೆ ಜರಗಿತು. ಆಡಳಿತ ಮೋಕ್ತೆಸರ ಯು. ಬಾಬು ಮೊಗೇರ ಎರ್ನೋಡಿ, ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಸೇವಾ ಟ್ರಸ್ಟ್, ಶ್ರೀ ಮೊಗೇರ ಸಮಾಜ ಸೇವಾ ಸಂಘ, ಮೊಗೇರ ಯುವಕ ಮಂಡಲ, ಯುವತಿ ಮಂಡಲ, ಯುವ ವೇದಿಕೆ, ಶ್ರೀ ಸರಸ್ವತಿ ಭಜನಾ ಮಂಡಳಿ ಮೊದಲಾದ ಸಮಿತಿಯ ಪದಾಧಿಕಾರಿಗಳು ಸದಸ್ಯರು, ಊರವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕರಿಸಿದರು.