

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಬಹುರಾಷ್ಟ್ರೀಯ ಕಂಪನಿಯಾದ ಕಾಂಟಿನೆಂಟಲ್ ಇದರ ವತಿಯಿಂದ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ನೇರ ಸಂದರ್ಶನ ನಡೆಯಿತು.

ಕಾಂಟಿನೆಂಟಲ್ ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿಗಳಾದ ಸಂಗಪ್ಪ ಮತ್ತು ಬಸವಲಿಂಗ ಇವರು ಆಗಮಿಸಿ ವಿದ್ಯಾರ್ಥಿಗಳಿಗೆ ನೇರ ಸಂದರ್ಶನ ನಡೆಸಿದರು. ಇವರಿಗೆ ಕಾಲೇಜಿನ ಉದ್ಯೋಗ ನೇಮಕಾತಿ ವಿಭಾಗದ ಮುಖ್ಯಸ್ಥ ಅಮರೇಶ್ ಹೆಬ್ಬಾರ್ ಹಾಗೂ ಸದಸ್ಯರುಗಳಾದ ವರದರಾಜ್ ಬಲ್ಲಾಳ್, ಶಿವರಾಜ್, ಶಾದ್ವಳ, ಅಶೋಕ್ ಸಹಕಾರ ನೀಡಿದರು.
ದಕ್ಷಿಣ ಕನ್ನಡ ಜಿಲ್ಲೆಯ ಹಲವು ಪಾಲಿಟೆಕ್ನಿಕ್ ಕಾಲೇಜುಗಳಿಂದ ವಿದ್ಯಾರ್ಥಿಗಳು ಈ ನೇರ ಸಂದರ್ಶನದಲ್ಲಿ ಪಾಲ್ಗೊಂಡರು.