

ಬಂದಾರು: ಗ್ರಾಮದ ಕುರಾಯ ಶ್ರೀ ಸದಾಶಿವ ದೇವಸ್ಥಾನದಲ್ಲಿ ಧರ್ಮಸ್ಥಳದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಗೌರವಾಧ್ಯಕ್ಷ ಶರತ್ ಕೃಷ್ಣ ಪಡ್ವೆಟ್ನಾಯರವರ ಮಾರ್ಗದರ್ಶನದೊಂದಿಗೆ ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ತoತ್ರಿಯವರ ನೇತೃತ್ವದಲ್ಲಿ ಶ್ರೀ ಸದಾಶಿವ ದೇವರ ಪ್ರತಿಷ್ಠಾ ಮಹೋತ್ಸವ ಮತ್ತು ವಾರ್ಷಿಕ ಜಾತ್ರೋತ್ಸವ ಪ್ರಯುಕ್ತ ಎ. 8ರಂದು ಬೆಳಗ್ಗೆ ಉತ್ಸವ ಬಲಿ, ವಿಶೇಷ ಸುತ್ತುಗಳು, ದರ್ಶನ ಬಲಿ, ನಂತರ ಬಟ್ಟಲು ಕಾಣಿಕೆ, ಅಪ್ಪಂಗಾಯಿ, ಶ್ರೀ ದೇವರಿಗೆ ಕಲಶಾಭಿಷೇಕ, ರುದ್ರಾಭಿಷೇಕ, ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ, ನಂತರ ಪಲ್ಲಪೂಜೆ, ಆರಾಟಕ್ಕೆ ಕುದಿ ಕರೆಯುವುದು, ಪ್ರಸಾದ ವಿತರಣೆ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸೇವೆ, ಸಂಜೆ ತೇರ ಕಲಶ, ಉತ್ಸವ ಬಲಿ, ವಿಶೇಷ ಸುತ್ತುಗಳು, ನಂತರ ರಕ್ತೇಶ್ವರಿ ದೈವದ ನೆಮೋತ್ಸವ, ರಾತ್ರಿ ಶ್ರೀ ಸದಾಶಿವ ದೇವರ ರಥೋತ್ಸವ, ನಂತರ ರಕ್ತೇಶ್ವರಿ ದೈವದ ಸಹಿತ ಶ್ರೀ ದೇವರ ಮೂಲ ಕ್ಷೇತ್ರಕ್ಕೆ ಭೇಟಿ, ರಾತ್ರಿ ಶ್ರೀ ಕ್ಷೇತ್ರಕ್ಕೆ ದೇವರ ಆಗಮನ, ನಂತರ ಫಲಹಾರ ಮತ್ತು ಭೂತಬಲಿ, ನಂತರ ದೇವರ ಶಯನೋತ್ಸವ ಕಾರ್ಯಕ್ರಮ ಚೆಂಡೆನಾದನ, ಬ್ಯಾಂಡ್ ವಾಳಗ, ಸಿಡಿಮದ್ದು, ಜೇಂಕಾರದೊಂದಿಗೆ ವಿವಿಧ ಧಾರ್ಮಿಕ, ವೈದಿಕ ಕಾರ್ಯಕ್ರಮಗಳೊಂದಿಗೆ ನೆರವೇರಿತು.


ಕುರಾಯ ಶ್ರೀ ಸದಾಶಿವ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಬು ಗೌಡ ಮಡ್ಯಲಕಂಡ, ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಕುರಾಯ ದೇವಸ್ಥಾನ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಚಂದಪ್ಪ ಪೂಜಾರಿ, ಪ್ರಗತಿಪರ ಕೃಷಿಕ ಧರ್ಣಪ್ಪ ಗೌಡ ಅಂಡಿಲ, ಯಕ್ಷಗಾನ ಸಮಿತಿ ಅಧ್ಯಕ್ಷ ಹರೀಶ್ ಹೊಳ್ಳ ಕಲ್ರೋಡಿ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಕೃಷ್ಣಯ್ಯ ಆಚಾರ್ಯ, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವೆಂಕರಮಣ ಗೌಡ ಬಾಳೆಹಿತ್ತಿಲು, ನಿರಂಜನ ಗೌಡ ನಡುಮಜಲು, ಲಕ್ಷ್ಮಣ ನಾಯ್ಕ ಮುಂಡೂರು, ದಮಯಂತಿ ಪಾoಜಾಳ, ರೂಪ ವಿಶ್ವಕರ್ಮ, ಅರ್ಚಕ ಭೀಮ್ ಭಟ್, ಜಾತ್ರೋತ್ಸವ ಸಮಿತಿ ಪದಾಧಿಕಾರಿಗಳು, ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.