

ಬೆಳಾಲು: ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಮಾಯದಲ್ಲಿ ಎ. 8ರಂದು ಸಮುದಾಯದತ್ತ ಶಾಲಾ ಕಾರ್ಯಕ್ರಮದ ಜೊತೆಗೆ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಹಳೆ ವಿದ್ಯಾರ್ಥಿ ಸಂಘ, ಮಾಯ ಫ್ರೆಂಡ್ಸ್ ಮಾಯ ಇವರ ಸಹಯೋಗದಲ್ಲಿ ಪೋಷಕರು ಹಾಗೂ ಎಲ್ಲಾ ದಾನಿಗಳ ಸಹಕಾರದಿಂದ ಶಾಲಾ ಅಂಗಳಕ್ಕೆ ಅಳವಡಿಸಿರುವ ಇಂಟರ್ ಲಾಕ್ ಅನಾವರಣ ಹಾಗೂ ಗಾರ್ಡನ್ ಉದ್ಘಾಟನಾ ಕಾರ್ಯಕ್ರಮ ಜರುಗಿತು.

ಶಾಲಾ ಅಂಗಳಕ್ಕೆ ಅಳವಡಿಸಿರುವ ಇಂಟರ್ ಲಾಕ್ ಅನ್ನು ಗ್ರಾಮದ ಕೊಡುಗೈ ದಾನಿಗಳಾದ ಜಯಣ್ಣ ಗೌಡ ಮಿನಂದೇಲು ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಗೌಡ ಹೂವಿನ ಗಿಡ ನೆಡುವ ಮೂಲಕ ಗಾರ್ಡನ್ ಉದ್ಘಾಟನೆ ನೆರವೇರಿಸಿ ನಂತರ ನಡೆದ ಸಭೆಯಲ್ಲಿ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರ ಅಭಿವೃದ್ಧಿ ಕಾರ್ಯಗಳನ್ನು ಶ್ಲಾಘಿಸಿ, ಹಳೆ ವಿದ್ಯಾರ್ಥಿ ಸಂಘ ಹಾಗೂ ಮಾಯಾ ಫ್ರೆಂಡ್ಸ್ ಮಾಯ ಹಾಗೂ ದಾನಿಗಳ ಸಹಕಾರವನ್ನು ಪ್ರಶಂಸಿಸಿದರು.
ಸಮುದಾಯದತ್ತ ಶಾಲಾ ಕಾರ್ಯಕ್ರಮದ ಮಾರ್ಗದರ್ಶಿ ಶಿಕ್ಷಕರಾಗಿ ಆಗಮಿಸಿದ್ದ ಬದನಾಜೆ ಪ್ರೌಢ ಶಾಲೆಯ ಶಿಕ್ಷಕ ವಿಠಲ್ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಮಾರ್ಗದರ್ಶನದ ಮಾತುಗಳನ್ನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್.ಡಿ.ಎಂ.ಸಿ ಅಧ್ಯಕ್ಷ ಸುರೇಂದ್ರ ಗೌಡ ಸುರುಳಿ ಶಾಲೆಯ ಅಭಿವೃದ್ಧಿ ಕಾರ್ಯಕ್ಕೆ ನೆರವಾದ ಎಲ್ಲಾ ದಾನಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿ, ಇಂಟರ್ ಲಾಕ್ ಅಳವಡಿಕೆಯ ಜವಾಬ್ದಾರಿ ಹೊತ್ತು ಕಾರ್ಯನಿರ್ವಹಿಸಿದ ಮಾಯ ಫ್ರೆಂಡ್ಸ್ ಮಾಯ ಇದರ ಅಧ್ಯಕ್ಷ ರಾಧಾಕೃಷ್ಣ ಗೌಡ ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರವೀಣ್ ಅವರನ್ನು ಅಭಿನಂದಿಸಿದರು.

ಗ್ರಾ.ಪಂ. ಮಾಜಿ ಅಧ್ಯಕ್ಷರು ಹಾಲಿ ಸದಸ್ಯೆ ಜಯಂತಿ, ಶಾಲಾ ಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷರುಗಳಾದ ಸುಕನ್ಯಾ ನಾರಾಯಣ ಸುವರ್ಣ, ಗಂಗಾಧರ ಸಾಲಿಯಾನ್, ಸಿ. ಆರ್. ಪಿ ಪ್ರತಿಮಾ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಶಶಿಕಲಾ, ಅಂಗನವಾಡಿ ಶಿಕ್ಷಕಿ ಲೋಕಮ್ಮ, ಮಾಯ ಫ್ರೆಂಡ್ಸ್ ಅಧ್ಯಕ್ಷ ರಾಧಾಕೃಷ್ಣ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರವೀಣ್ ,ಶಾಲಾ ಸಂಸತ್ತು ನಾಯಕ ಚರಣ್ , ಮುಖ್ಯ ಶಿಕ್ಷಕರಾದ ವಿಠಲ್ ಎಂ. ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದಲ್ಲಿ 6ನೇ ತರಗತಿ ವಿದ್ಯಾರ್ಥಿನಿ ನವ್ಯಶ್ರೀ ಇವರು ಪ್ರಾರ್ಥಿಸಿ, ಮುಖ್ಯೋಪಾಧ್ಯಾಯ ವಿಠಲ್ ಎಂ. ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಜಿಪಿಟಿ ಶಿಕ್ಷಕ ಯೋಗೇಶ ಹೆಚ್. ಆರ್. ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಜ್ಯೋತಿ ಎಂ.ಎಸ್ ವಂದಿಸಿದರು.