


ಕುಂಟಾಲಪಳಿಕೆ: ಏ. 5ರಂದು ಅಂಗನವಾಡಿ ಕೇಂದ್ರದ ವಾರ್ಷಿಕ ಸಂಭ್ರಮದ ಪ್ರಯುಕ್ತ ಅಂಗನವಾಡಿ ಪುಟಾಣಿಗಳಿಂದ ವಿವಿಧ ನೃತ್ಯ, ರೂಪಕ, ಹಾಡು ಅಭಿನಯಗೀತೆ ಇತ್ಯಾದಿ ನಡೆಸಲಾಯಿತು.


ಉದ್ಘಾಟನೆಯನ್ನು ಕುಂಟಾಲಪಳಿಕೆ ಬಾಲವಿಕಾಸ ಸಮಿತಿ ಅಧ್ಯಕ್ಷೆ ಕುಶಾಲಾಕ್ಷಿ ದೀಪ ಬೆಳಗಿಸಿ ಮಕ್ಕಳಿಗೆ ಶುಭ ಹಾರೈಸಿದರು. ಅಂಗನವಾಡಿ ಕಾರ್ಯಕರ್ತೆ ಸತ್ಯಪ್ರಭಾ ಎಸ್., ವಿದ್ಯಾ ದುಗ್ಗಪ್ಪಗೌಡ ಪೋಷಕರು, ಬಾಲವಿಕಾಸ ಸಮಿತಿ ಸದಸ್ಯ ಶ್ರೀಧರ, ಆಶಾಕಾರ್ಯಕರ್ತೆ ಕವಿತಾ, ಇಂದಿರಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪುಟಾಣಿ ಮಕ್ಕಳು ಪ್ರಾರ್ಥನೆ ಮಾಡಿದರು. ವಿಮಲ ಆರ್. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಶ್ರೀ ಎ. ಧರ್ಮರಾಜ ಗೌಡ ಅಡ್ಕಾಡಿ ಹಾಗೂ ಗಿರಿಧರ ಇವರು ಫಲಹಾರ ಹಾಗೂ ಸಿಹಿತಿಂಡಿ ವ್ಯವಸ್ಥೆಯನ್ನು ಮಾಡಿದರು. ಬಳಿಕ ಬಾಲವಿಕಾಸ ಸಮಿತಿ ಸಭೆಯನ್ನು ನಡೆಸಲಾಯಿತು. ಜಯಶ್ರೀ ಸ್ವಾಗತಿಸಿ, ಧನ್ಯವಾದ ಸಲ್ಲಿಸಿದರು.









