ನಂದಿನಿ ಹಾಲಿನ ದರ 4ರೂ. ಏರಿಕೆ

0

ಬೆಳ್ತಂಗಡಿ: ಈಗಾಗಲೇ ಹಲವು ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ರಾಜ್ಯ ಸರ್ಕಾರ ಮತ್ತೊಂದು ಏರಿಕೆ ಶಾಕ್ ನೀಡಿದ್ದು, ನಂದಿನಿ ಹಾಲಿನ ದರ ಏರಿಕೆ ಮಾಡಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಮಾ.27ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಹಾಲಿನ ದರ ಪ್ರತಿ ಲೀಟರ್‌ಗೆ 4 ರೂ. ಏರಿಕೆಯಾಗಲಿದೆ. ಈ ಮೂಲಕ ಒಂದು ವರ್ಷದ ಅಂತರದಲ್ಲಿ ಎರಡು ಬಾರಿ ಹಾಲಿನ ದರ ಹೆಚ್ಚಳವಾಗಿದೆ.

ಹಾಲು ಒಕ್ಕೂಟ ಹಾಗೂ ರೈತರಿಂದ ಹಾಲು ದರ ಹೆಚ್ಚಳಕ್ಕೆ ಬೇಡಿಕೆ ನಿರಂತವಾಗಿ ಹೆಚ್ಚಿದ ಹಿನ್ನೆಲೆಯಲ್ಲಿ ಪ್ರತಿ ಲೀಟ‌ರ್ ಹಾಲಿನ ದರ 5 ರೂ. ಹೆಚ್ಚಳ ಮಾಡಬೇಕೆಂದು ಒಕ್ಕೂಟಗಳು ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ್ದರು. ಆದರೆ ಇದೀಗ ಸಚಿವ ಸಂಪುಟ ಪ್ರತಿ ಲೀಟ‌ರ್ ಹಾಲಿಗೆ ನಾಲ್ಕು ರೂ ಏರಿಕೆಗೆ ಒಪ್ಪಿಗೆ ನೀಡಿದೆ.

ರಾಜ್ಯದಲ್ಲಿ ಸದ್ಯ ಹೋಮೋಜಿನೆಸ್ಟ್ ಟೋನ್ಸ್ ಹಾಲು ಅರ್ಧ ಲೀಟರ್ 24 ರೂ. ಹೋಮೋಜಿನೆಸ್ಟ್ ಟೋನ್ಸ್ ಹಾಲು ಒಂದು ಲೀಟರ್ 45 ರೂ. ಇದೆ. ಹೊಸ ದರ ಜಾರಿಗೆ ಬಂದ್ರೆ ಅರ್ಧ ಲೀಟರ್ 26 ಮತ್ತು ಒಂದು ಒಂದು ಲೀಟರ್ ಹಾಲು 49 ರೂಪಾಯಿ ಆಗಲಿದೆ.

LEAVE A REPLY

Please enter your comment!
Please enter your name here