

ಮೇಲಂತಬೆಟ್ಟು: ವಿಶ್ವ ವಿಶೇಷ ಚೇತನರ ದಿನಾಚರಣೆಯ ಪ್ರಯುಕ್ತ ಮೇಲಂತಬೆಟ್ಟು ಗ್ರಾಮ ಪಂಚಾಯತ್ ಸಭಾಭವನದಲ್ಲಿ ವಿಶೇಷ ಚೇತನರ ಗ್ರಾಮ ಸಭೆಯನ್ನು ಮಾ. 27ರಂದು ನಡೆಸಲಾಯಿತು.
ತಾಲೂಕು ಸಂಯೋಜಕ ಜಾನ್ಡಿಸೋಜರವರು ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಪಟ್ಟಣ ಪಂಚಾಯತ್ ಸಂಯೋಜಕಿ ಫೌಸಿಯ ತನ್ನ ಅಭಿಪ್ರಾಯ ಮಂಡಿಸಿದರು. ಮೇಲಂತಬೆಟ್ಟು ಗ್ರಾ.ಪಂ. ಅಧ್ಯಕ್ಷೆ ಸವಿತಾ ಹಾಗೂ ಉಪಾಧ್ಯಕ್ಷ ಲೋಕನಾಥ ಶೆಟ್ಟಿ ಮಾತನಾಡಿ ಸಲಹೆ ನೀಡಿದರು.
ಶೇಕಡಾ 5ರ ನಿಧಿಯಲ್ಲಿ ಶಾಂಭವಿ ಸವಣಾಲು, ವಿಹಾನ್ ಸವಣಾಲು, ಋತ್ವಿಕ್ ಮುಂಡೂರು, ಸರಸ್ವತಿ ಸತೀಶ, ಮುಂಡೂರು, ಹರೀಶ್ ಸವಣಾಲು ಹಾಗೂ ತಿಮ್ಮಯ್ಯ ಮೇಲಂತಬೆಟ್ಟು ರವರಿಗೆ ರೂ. 2000ದಂತೆ ಚೆಕ್ ವಿತರಣೆ ಮಾಡಲಾಯಿತು.
ಸಭೆಯಲ್ಲಿ ಪುನರ್ವಸತಿ ಕಾರ್ಯಕರ್ತರಾದ ಜೋಸೆಫ್ ಇಂದಬೆಟ್ಟು, ವೀರಣ್ಣ ಬೆಳಾಲು, ಪಂಚಾಯತು ಸದಸ್ಯರುಗಳಾದ ಚಂದ್ರಶೇಖರ್ ,ವೇಣುಗೋಪಾಲ್, ಸುಮಲತಾ, ಮೇಲಂತಬೆಟ್ಟು ಪುನರ್ವಸತಿ ಕಾರ್ಯಕರ್ತ ಗಣೇಶ್, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಿರ್ಮಲ್ ಕುಮಾರ್ ಸ್ವಾಗತಿಸಿ, ವಂದಿಸಿದರು.