ಬೆಳ್ತಂಗಡಿ: ಆದಿದೈವ ಧೂಮಾವತಿ, ಸಾಯನ ಬೈದ್ಯರ ಗುರುಪೀಠ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ನಂದನಬಿತ್ತ್‌ಲ್ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ವಾರ್ಷಿಕ ಜಾತ್ರಾ ಮಹೋತ್ಸವ ಅಂಗವಾಗಿ ಮಾ.4ರಂದು ಬೆಳಗ್ಗೆ 9ರಿಂದ ಗಣಪತಿ ಹೋಮ, ಗುರುಪೂಜೆ, ಮೂಲಸ್ಥಾನ ಗರಡಿ, ಬೆಮ್ಮೆರೆ ಗುಂಡ, ಸತ್ಯಧರ್ಮ ಚಾವಡಿಯಲ್ಲಿ ನವಕ ಪ್ರಧಾನ ಹೋಮ, ನವಕ ಕಲಶಾಭಿಷೇಕ, ಅಲಂಕಾರ ಪೂಜೆ, ಗರಡಿಯಲ್ಲಿ ಮಹಾಪೂಜೆ, ಮಧ್ಯಾಹ್ನ ಗಂ ೧೨.೩೦ ಕ್ಕೆ ಸತ್ಯಧರ್ಮ ಚಾವಡಿಯಲ್ಲಿ ಮಹಾಪೂಜೆ, ಪಲ್ಲಪೂಜೆ, ಅನ್ನಸಂತರ್ಪಣೆ ನಡೆಯಿತು.
ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಗೌರವಾಧ್ಯಕ್ಷರಾದ ಪೀತಾಂಬರ ಹೇರಾಜೆ, ಜಯಂತ ನಡುಬೈಲು, ಮೊಕ್ತೇಸರ ಶ್ರೀಧರ ಪೂಜಾರಿ, ಪ್ರಧಾನ ಕಾರ್ಯದರ್ಶಿ ಡಾ. ರಾಜಾರಾಮ ಕೆ.ಬಿ., ಉಪಾಧ್ಯಕ್ಷರಾದ ಉಲ್ಲಾಸ್ ಕೋಟ್ಯಾನ್, ದೀಪಕ್ ಕೋಟ್ಯಾನ್ ಗುರುಪುರ, ಕೋಶಾಧಿಕಾರಿ ಮೋಹನ್‌ದಾಸ ವಾಮಂಜೂರು, ಜತೆ ಕಾರ್ಯದರ್ಶಿ ಜಯ ವಿಕ್ರಮ್, ಕೆ.ಪಿ.ಸಿ ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮತ್ತಿತರು ಉಪಸ್ಥಿತರಿದ್ದರು.
ಬೆಳ್ತಂಗಡಿಯಿಂದ ಗೆಜ್ಜೆಗಿರಿಗೆ ಸಾವಿರಾರು ಮಂದಿ ಭೇಟಿ: ಗೆಜ್ಜೆಗಿರಿಯಲ್ಲಿ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಬೆಳ್ತಂಗಡಿ ತಾಲೂಕಿನಿಂದ ಸಾವಿರಾರು ಮಂದಿ ಭಾಗವಹಿಸಿದ್ದರು. ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಗೌರವಾಧ್ಯಕ್ಷ ಪೀತಾಂಬರ ಹೇರಾಜೆ, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಮಹಿಳಾ ಘಟಕದ ಸಂಚಾಲಕಿ ಸುಜಿತಾ ವಿ. ಬಂಗೇರ, ಬೆಳ್ತಂಗಡಿ ತಾಲೂಕು ಜಾತ್ರೋತ್ಸವ ಸಮಿತಿಯ ಪ್ರಧಾನ ಸಂಚಾಲಕ ನಿತ್ಯಾನಂದ ನಾವರ, ಗೆಜ್ಜೆಗಿರಿಯ ಟ್ರಸ್ಟಿ ನಾರಾಯಣ ಪೂಜಾರಿ ಮಚ್ಚಿನ, ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ ಕಲ್ಲಾಪು, ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷೆ ಸುಮತಿ ಪ್ರಮೋದ್, ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ನಿರ್ದೇಶಕರುಗಳಾದ ವಿನೋದಿನಿ ರಾಮಪ್ಪ, ಸಂತೋಷ ಉಪ್ಪಾರು, ರೂಪೇಶ್ ಧರ್ಮಸ್ಥಳ, ಸಂತೋಷ ಎನ್.ಸಿ, ಮಹಿಳಾ ಬಿಲ್ಲವ ವೇದಿಕೆಯ ಮಾಜಿ ಅಧ್ಯಕ್ಷೆ ರಾಜಶ್ರೀ ರಮಣ್, ಪ್ರೇಮ ಉಮೇಶ್, ಪ್ರಮುಖರಾದ ಜಯರಾಮ ಬಂಗೇರ ಹೇರಾಜೆ, ಲಿಂಗಪ್ಪ ಪೂಜಾರಿ ಪುದುವೆಟ್ಟು, ಪುರುಷೋತ್ತಮ ಧರ್ಮಸ್ಥಳ, ಸುರೇಶ್ ಪುದುವೆಟ್ಟು, ವಸಂತ ಸುವರ್ಣ ಲಾಯಿಲ, ಹರೀಶ್ ಕುಮಾರ್ ಕಳಿಯ, ಕೇಶವ ಪೂಜಾರಿ ಕಳಿಯ, ದಿವಾಕರ ಪೂಜಾರಿ ಮಚ್ಚಿನ, ಸತೀಶ್ ಪಿ. ಎನ್. ವೇಣೂರು, ಶಾಂಭವಿ ಪಿ. ಬಂಗೇರ ನಮಿತಾ ತೋಟತ್ತಾಡಿ, ಸುಚಿತ್ರ ಕೊಲ್ಲಾಜೆ, ಯಶೋದಾ ಕುತ್ಲೂರು, ಪುಷ್ಪಾವತಿ ನಿತ್ಯಾನಂದ, ಶಾಂತಾ ಬಂಗೇರ, ಕೇಶವತಿ ತಣ್ಣೀರುಪಂತ, ಉಷಾ ಶರತ್, ಮಧುರ ರಾಘವ, ಜ್ಯೋತಿ ಮಧ್ವರಾಜ್, ವೇದಾ ಜೆ.ಪಿ. ಬೆಳಾಲು, ಗುಣವತಿ ಕುಕ್ಕೇಡಿ, ನಾಗವೇಣಿ, ಸೌಮ್ಯ ಲಾಯಿಲ, ಮೀನಾಕ್ಷಿ ರೆಂಕೆದಗುತ್ತು, ಸುನೀತಾ ಧರ್ಮಸ್ಥಳ, ಹರಿಣಾಕ್ಷಿ, ಪಲ್ಲವಿರಾಜು, ವಿನಯ ಬಂಗಾಡಿ, ಲಲಿತಾ ಚಿದಾನಂದ, ವಾರಿಜ ವಸಂತ ಸುವರ್ಣ, ಸುಜಲತಾ ನಾರಾವಿ, ವಿಮಲಾ ಜೆ. ಬಂಗೇರ, ಲೋಲಾಕ್ಷಿ ಶೇಖರ್, ಸುಜಾತಾ ಜಯರಾಮ್, ವಿನೋದ ಪಡಂಗಡಿ, ಲಲಿತ ಕುವೆಟ್ಟು, ಇಂದಿರಾ, ನಿಶ್ಮಿತಾ, ಅನಿತಾ ವಸಂತ ಕುಡೆಕ್ಕಲ್, ಪ್ರಮೀಳಾ ಗೇರುಕಟ್ಟೆ, ಮಾಲತಿ ಸಹಿತ ಸಾವಿರಾರು ಮಂದಿ ಬೆಳ್ತಂಗಡಿ ತಾಲೂಕಿನಿಂದ ಗೆಜ್ಜೆಗಿರಿಗೆ ತೆರಳಿದ್ದರು.